ಕಲಬುರಗಿ: ವಿಜಯೇಂದ್ರ ಹೋದ್ರೆ ನಾಲ್ಕೈದು ದಿನದಲ್ಲಿ ಪಾರ್ಟಿಯಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಯಾರೂ ತೆಲೆ ಕೆಡಿಸಿಕೊಳ್ಳಬೇಡಿ ಎಲ್ಲ ಒಳೆಯದಾಗುತ್ತೆ.
Advertisement
ವಿಜಯೇಂದ್ರ ಹೋದ್ರೆ ನಾಲ್ಕೈದು ದಿನದಲ್ಲಿ ಪಾರ್ಟಿಯಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ, ನಮ್ಮದು ಮೂರು ಅಜೆಂಡಾ ಇದೆ. ಹಿಂದುತ್ವ, ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ದ ನಮ್ಮ ಹೋರಾಟ. ಕೇಂದ್ರದ ನಾಯಕರು ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಇನ್ನೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತೀರಿ, ಇಲ್ಲಿ ಯಡಿಯೂರಪ್ಪ ಮಗನ್ನ ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಹೀಗೆಲ್ಲಾ ಮಾಡೋದಿದ್ದರೇ ಇನ್ಮೇಲೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹಾಗೂ ಹಿಂದುತ್ವ ಬಗ್ಗೆ ಮಾತನಾಡಬೇಡಿ ಎಂದು ಆಕ್ರೋಶ ಹೊರಹಾಕಿದರು.