ಮೈಸೂರು: ಮೋದಿ ಬಗ್ಗೆ ಮಾತಾಡದೆ ಇದ್ದರೆ ಲಾಡ್‌ಗೆ ತಿಂದಿದ್ದು ಕರಗುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಲಾಡ್ ನೀವು ಏನ್ ಮಾತಾಡ್ತಿದ್ದೀರಿ ಅನ್ನೋ ಜ್ಞಾನ ನಿಮಗೆ ಇದ್ಯಾ? ಮೋದಿ ಬಗ್ಗೆ ಮಾತಾಡದೆ ಇದ್ದರೆ ಲಾಡ್‌ಗೆ ತಿಂದಿದ್ದು ಕರಗುವುದಿಲ್ಲ.
Advertisement
ಮರಾಠ ಸಮುದಾಯದ ಸಂತೋಷ್ ಲಾಡ್ ಬಾಯಲ್ಲಿ ಶಿವಾಜಿ ರೀತಿ ಮಾತು ಬರುತ್ತಿಲ್ಲ. ಅಬ್ದುಲ್ ಖಾನ್ ರೀತಿ ಮಾತು ಬರುತ್ತಿದೆ. ನೀವೇನೂ ಬಹಳ ಮೇಧಾವಿ ನಾ? ಸಂತೋಷ್ ಲಾಡ್ ಒಬ್ಬ ತಿಳಿಗೇಡಿ.
ನೇಹಾ ಹತ್ಯೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ ಮೋದಿ ಕೇಳ್ರಿ ಅಂತಾರೆ? ಹತ್ಯೆ ಮಾಡಿದವನ ಏನ್‌ಕೌಂಟರ್‌ಗೆ ಮೋದಿ ಅನುಮತಿ ಏಕೆ ಬೇಕು ಲಾಡ್? ಒಂದು ವರ್ಷವಾಯ್ತು ನೇಹಾಗೆ ನ್ಯಾಯ ಕೊಡಿಸಿದ್ರಾ ಎಂದು ವಾಗ್ಧಾಳಿ ನಡೆಸಿದ್ದಾರೆ.