ಬೆಂಗಳೂರು:– ವಾಹನ ಸವಾರರೇ ಇದು ನೋಡಲೇಬೇಕಾದ ಸ್ಟೋರಿ..ಇನ್ಮುಂದೆ ಬೆಂಗಳೂರು-ಮೈಸೂರು ಹೈವೇಯಲ್ಲಿ ಓವರ್ ಸ್ಪೀಡ್ ಹೋದ್ರೆ ಕೇಸ್ ದಾಖಲಿಸ್ತಾರೆ ಸಂಚಾರಿ ಪೊಲೀಸರು.
ಬೆಂಗಳೂರು-ಮೈಸೂರು ಹೈವೇಯಲ್ಲಿ ಟ್ರಾಫಿಕ್ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ರ್ಯಾಶ್ ಡ್ರೈವಿಂಗ್ ನಿಲ್ಲುತ್ತಿಲ್ಲ. 130 ಕಿಮೀಗೂ ಅಧಿಕ ಸ್ಪೀಡ್‌ನಲ್ಲಿ ವಾಹನಗಳು ಸಂಚರಿಸುತ್ತಿವೆ. ಇಂಟರ್‌ಸೆಪ್ಟರ್‌ಗಳು ಇದ್ದರೂ ಹಲವರು ಕ್ಯಾರೇ ಮಾಡುತ್ತಿಲ್ಲ. ಹೀಗಾಗಿ ಅಪಘಾತಗಳಾಗುತ್ತಿವೆ. ಅತಿ ವೇಗದ ಚಾಲನೆಯಿಂದಲೇ 90%ರಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಅತಿ ವೇಗದಲ್ಲಿ ಚಾಹನ ಚಲಾಯಿಸುವವರ ವಿರುದ್ಧ ಕೇಸ್ ದಾಖಲು ಮಾಡಲು ಪೊಲೀಸರು ಮುಂದಾಗಿದ್ದಾರೆ.
ನಿನ್ನೆ ಮೈಸೂರು ಬೆಂಗಳೂರು ಹೈವೇ ಸಿಸಿಟಿವಿಗಳನ್ನು ಸಂಚಾರಿ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ಮಾಡಿದ್ದರು. ಪರಿಶೀಲನೆ ವೇಳೆ ಒಂದೇ ದಿನ 150ಕ್ಕೂ ಹೆಚ್ಚು ಅತಿ ವೇಗದ ಚಾಲನೆ ಕೇಸ್‌ಗಳು ಪತ್ತೆಯಾಗಿವೆ. ಇದರಿಂದ ಓವರ್‌ಸ್ಪೀಡ್‌ಗೆ ಬ್ರೇಕ್ ಹಾಕಲು ಎಡಿಜಿಪಿ ಅಲೋಕ್ ಕುಮಾರ್ ಹೊಸ ಅಸ್ತ್ರ ಕೈಗೆತ್ತಿಕೊಂಡಿದ್ದು, ಆಗಸ್ಟ್ 1ರಿಂದ ಅದನ್ನು ಚಲಾಯಿಸಲಿದ್ದಾರೆ.
ಮಿತಿ ಮೀರಿದ ವೇಗದಿಂದ ಚಾಲನೆ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ಸ್ಪೀಡ್‌ನಲ್ಲಿ 130 ಕಿಮೀ ದಾಟಿದರೆ ಎಫ್ಐಆರ್ ದಾಖಲಾಗಲಿದೆ. ನಂತರ ಚಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವಾಹನ ಚಾಲನೆ ಪರವಾನಗಿಯೂ ರದ್ದಾಗಬಹುದು. ಹೀಗೆಂದು ಎಕ್ಸ್ ಖಾತೆ ಮೂಲಕ ಅಲೋಕ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.