ಬೆಂಗಳೂರು:- ರಾಜಕೀಯಕ್ಕೆ ಮಣಿದು ಲಾರಿ ಮಾಲೀಕರು ಮುಷ್ಕರ ಮಾಡೋದು ಸರಿಯಲ್ಲ. ಹಿಂದೆ ಡೀಸೆಲ್ ದರ ಏರಿಕೆ ಆದಾಗ ಯಾಕೆ ಲಾರಿ ಮಾಲೀಕರು ಮುಷ್ಕರ ಮಾಡಲಿಲ್ಲ?ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ರಾಜ್ಯದಲ್ಲಿ ಡಿಸೇಲ್ ದರ ಏರಿಕೆ ಖಂಡಿಸಿ ಲಾರಿ ಮಾಲೀಕರು ಮುಷ್ಕರಕ್ಕೆ ಕರೆ ನೀಡಿರುವ ವಿಚಾರ ಕುರಿತು ಮಾತನಾಡಿದರು. ರಾಜಕೀಯಕ್ಕೆ ಮಣಿದು ಲಾರಿ ಮಾಲೀಕರು ಮುಷ್ಕರ ಮಾಡೋದು ಸರಿಯಲ್ಲ. ಮುಷ್ಕರ ಮಾಡಿದ್ರೆ ನಿಮಗೆ ನಷ್ಟ ಆಗುತ್ತೆ. ಹಾಗಾಗಿ ಯಾವುದೇ ಮುಷ್ಕರ ಮಾಡಬೇಡಿ ಎಂದು ಮನವಿ ಮಾಡಿದರು.
ಲಾರಿ ಮಾಲೀಕರು ಮುಷ್ಕರ ಕರೆದಿರೋ ಬಗ್ಗೆ ಮಾಹಿತಿ ಇಲ್ಲ. ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಆದಾಗ ಯಾಕೆ ಇವರು ಮುಷ್ಕರ ಮಾಡಲಿಲ್ಲ? ಆವತ್ತು ಕೂಡ ಮುಷ್ಕರ ಮಾಡಬಹುದಿತ್ತಲ್ಲ. ಈಗ ರಾಜಕೀಯ ಕಾರಣಕ್ಕಾಗಿ ಮುಷ್ಕರ ಮಾಡ್ತಿದ್ದಾರೆ. ಈಗಲೂ ಎಲ್ಲಾ ಲಾರಿ ಮಾಲೀಕರಿಗೆ ಮನವಿ ಮಾಡ್ತೀನಿ. ಸುಮ್ಮನೆ ರಾಜಕೀಯಕ್ಕೆ ಒಳಗಾಗಬೇಡಿ. ರಾಜಕೀಯಕ್ಕೆ ಮಣಿದು ಮುಷ್ಕರ ಮಾಡೋದು ಸರಿಯಲ್ಲ ಎಂದು ಹೇಳಿದರು.