ತಲೆಹೊಟ್ಟು, ಕೂದಲು ಉದುರುವಿಕೆ ಹೆಚ್ಚಿನ ಜನರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ತಜ್ಞರ ಪ್ರಕಾರ, ಶಿಲೀಂಧ್ರಗಳ ಸೋಂಕು ಸೇರಿದಂತೆ ತಲೆಹೊಟ್ಟುಗೆ ಹಲವು ಕಾರಣಗಳಿರಬಹುದು. ಮಳೆಗಾಲದಲ್ಲಿ ಸ್ನಾನದ ನಂತರ ಕೂದಲಿನ ತೇವಾಂಶದಿಂದಾಗಿ ತಲೆಹೊಟ್ಟು ಸಮಸ್ಯೆ ಉಂಟಾಗುತ್ತದೆ.
ತಲೆಹೊಟ್ಟು ಕೂದಲಿನ ಆರೋಗ್ಯವನ್ನು ಹಾಳುಮಾಡುವ ಸಮಸ್ಯೆಯಾಗಿದ್ದು, ನಂತರ ಮೊಡವೆ ಮತ್ತು ನೆತ್ತಿಯ ತುರಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತಲೆಹೊಟ್ಟು ಸಮಸ್ಯೆಗೆ ತಕ್ಷಣ ಚಿಕಿತ್ಸೆ ನೀಡದಿದ್ದರೆ ಕೂದಲು ಉದುರುವ ಸಮಸ್ಯೆ ಜತೆಗೆ ಹಣೆ, ಮುಖ, ಬೆನ್ನು ಸೇರಿದಂತೆ ಹಲವೆಡೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ.
ಮಹಿಳೆಯರು ತಮ್ಮ ಸೌಂದರ್ಯಕ್ಕೆ ಪೂರಕವಾಗಿರುವ ತಲೆ ಕೂದಲನ್ನು ತೆಗೆಯಲಾಗದೇ ಹೊಟ್ಟಿನಿಂದ ಬಳಲುತ್ತಿರುತ್ತಾರೆ. ಜೊತೆಗೆ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳೋಣ ಎಂದರೂ ವೈದ್ಯರ ಫೀಸು ಹಾಗೂ ದುಬಾರಿ ಬೆಲೆಯ ಶಾಂಪೂ ಬಳಸಲು ಆರ್ಥಿಕ ಪರಿಸ್ಥಿತಿಯೂ ಉತ್ತಮ ಆಗಿರುವುದಿಲ್ಲ. ಹೀಗೆ, ತಲೆ ಹೊಟ್ಟಿನಿಂದ ಬೇಸತ್ತವರಿಗೆ ಸುಲಭವಾಗಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ನಿವಾರಣೆ ಮಾಡಿಕೊಳ್ಳುವ ಸಿಂಪಲ್ ಟಿಪ್ಸ್‌ಗಳು ಇಲ್ಲಿವೆ ನೋಡಿ..
ಮೆಹೆಂದಿ: ಇದು ಕೆಲವೊಬ್ಬರಿಗೆ ಹೀಟ್ ಆಗುತ್ತೆ. ಆದರೆ, ಇದು ನೂರಕ್ಕೆ ನೂರರಷ್ಟು ಫಲಿತಾಂಶಾವನ್ನು ನೀಡುತ್ತದೆ. ತಲೆಯಲ್ಲಿರುವ ಹೊಟ್ಟನ್ನು ಸಂಪೂರ್ಣವಾಗಿ ಮಾಯ ಮಾಡುತ್ತದೆ.
ನಿಂಬೆರಸ: ಆಂಟಿಮೈಕ್ರೋಬಿಯಲ್ ಅಂಶ ಇದರಲ್ಲಿ ಇರೋದ್ರಿಂದ ತಲೆಯಲ್ಲಿರುವ ಹೊಟ್ಟು ಸಂಪೂರ್ಣವಾಗಿ ದೂರವಾಗಿ, ನಿಮ್ಮ ಕೂದಲು ಪಳಪಳನೇ ಹೊಳೆಯುವ ಹಾಗೆ ಮಾಡುತ್ತದೆ.
ಮೊಸರು: ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಮೊಸರಿನೊಂದಿಗೆ ಕಲಸಿ. ಚೆನ್ನಾಗಿ ನೀವು ನಿಮ್ಮ ಕೂದಲಿಗೆ ಹಚ್ಚಿ. ಹೀಗೆ ವಾರಕ್ಕೆ 1 ಬಾರಿ ಮಾಡೋದ್ರಿಂದ ತಲೆಯಿಂದ ಹೊಟ್ಟು ನಿವಾರಣೆ ಆಗುತ್ತದೆ.
ತೆಂಗಿನ ಎಣ್ಣೆ: ಈ ಎಣ್ಣೆಯಲ್ಲಿ ಸಖತ್ ಪವರ್ ಇದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಮತ್ತು ಡ್ಯಾಂಡ್ರಫ್ ಕಡಿಮೆ ಮಾಡುತ್ತದೆ. ಈ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ತಲೆಗೆ ಹಚ್ಚಿ. 2 ಗಂಟೆ ಬಿಟ್ಟು ವಾಶ್ ಮಾಡಿ.
ತುಳಸಿ ಎಲೆ: ಎಸ್, ಈ ಎಲೆಯನ್ನು ಎಳ್ಳೆಣ್ಣೆಯೊಂದಿಗೆ ಮಿಕ್ಸ್ ಮಾಡಿ ನಿಮ್ಮ ತಲೆಗೆ ಹಚ್ಚಿ. 1 ಗಂಟೆಯ ನಂತರ ನೀವು ತಲೆ ಸ್ನಾನ ಮಾಡಬಹುದು. ಹೀಗೆ ವಾರಕ್ಕೆ ಒಂದು ಬಾರಿ ಆದ್ರೂ ಟ್ರೈ ಮಾಡಿ.
ಬೇಕಿಂಗ್ ಸೋಡಾ: ಇದರಿಂದ ಕೇವಲ ಅಡುಗೆ ಮಾಡೋಕೆ ಮಾತ್ರ ಉಪಯೋಗವಲ್ಲ. ಈ ರೀತಿಯಾಗಿ ಕೂಡ ಉಪಯುಕ್ತವಾಗಿದೆ. ಬೇಕಿಂಗ್ ಸೋಡಾವನ್ನು ನೆತ್ತಿಯ ಹೊರತಾಗಿ ಉಳಿದ ಎಲ್ಲಾ ತಲೆಯ ಭಾಗಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತಲೆಸ್ನಾನ ಮಾಡ್ಬೋದು.