ಮಂಡ್ಯ:- ಮಾಡೋದು ಪಿಡಿಓ ಕೆಲಸ ಆದರೆ ಈತನ ಐಷಾರಾಮಿ ಲೈಫು ನೋಡಿದ್ರೆ ನೀವೇ ಶಾಕ್ ಆಗ್ತೀರಾ. ಯಾವುದೇ ನಟ, ರಾಜಕಾರಣಿ, ರೌಡಿಗಳೂ ಕೂಡ ನಾಚಿಸುವಂತೆ ಮಾಡುತ್ತೆ ಈ ಮಂಡ್ಯ ಪಿಡಿಓ ಹವಾ. ಹಾಗಿದ್ರೆ ನಿಮಗೂ ಈತನ ಬಗ್ಗೆ ತಿಳಿದುಕೊಳ್ಳೋ ಇಂಟ್ರೆಸ್ಟ್ ಹೆಚ್ಚಾಗುತ್ತಿದ್ಯಾ!? ಒಮ್ಮೆ ಈ ಸ್ಟೋರಿ ನೋಡಿ.
ಎಸ್, ಎಲ್ಲರನ್ನೂ ಉಬ್ಬೇರಿಸುವಂತೆ ಮಂಡ್ಯದ ಪಿಡಿಓ ಒಬ್ಬನ ಐಷಾರಾಮಿ ಲೈಫ್ ಇದೆ ಅಂದರೆ ತಪ್ಪಾಗಲ್ಲ. ಕೈಯಲ್ಲಿ ದೊಡ್ಡ ಕಬ್ಬಿಣದ ರಾಡು, ಮುಖ, ಮೈ, ಕೈ ಮೇಲೆಲ್ಲ ಬ್ಲಡ್ ಜಿಮ್ ನಲ್ಲಿ ಸುಂದರಿ ಜೊತೆ ಬಾಡಿ ಬಿಲ್ಡ್, ಸಿಕ್ಸ್ ಪ್ಯಾಕ್ ಶೋ ಅಪ್.
ಸುತ್ತಲೂ ಬಾಡಿ ಬಿಲ್ಡರ್ಸ್, ಬೌನ್ಸರ್ಸ್ ಕಟ್ಕೊಂಡ್ ಓಡಾಡೋದೆ ಇವನ ಕ್ರೇಜ್. ಇನ್ನೂ ತಾನು ಖರೀದಿಸಿದ ದುಬಾರಿ ಹೊಸ ಇನ್ನೋವಾ ಕಾರು ಸ್ವೀಕರಿಸೋದ್ರಲ್ಲೂ ಈತ ಎಲ್ಲರಿಗಿಂತ ಡಿಫರೆಂಟ್. ಇನ್ನೂ ರಾಜಕಾರಣಿಗಳಿಗೆ ಈತ ಕೊಡೋದು ಅಂತಿಂತ ಉಡುಗೊರೆ ಅಲ್ಲ, ಬೆಳ್ಳಿ ಕಿರೀಟದಂತಹ ದುಬಾರಿ ಗಿಫ್ಟ್.
ಇಷ್ಟೇ ಅಲ್ಲ, ಪತ್ನಿ ಜೊತೆಗೆ ಸೇರಿ ಬಾಡಿಗಾರ್ಡ್ ಸಮೇತ ಆಗಮಿಸಿ ಕಾರು ಖರೀದಿಸ್ತಾನೆ. ಕಾರು ಖರೀದಿ ಬಳಿಕ ಪೂಜೆ ಸಲ್ಲಿಸಿ ಪತ್ನಿಯಿಂದಲೂ ಪೂಜೆ ಸಲ್ಲಿಸಿದ್ದಾನೆ. ಶಶಿಧರ್ ಎಂಬ ಪಿಡಿಓ 2018 ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದ. ಸಾಮಾನ್ಯ ಪಿಡಿಓ ಆಗಿರುವ ಈತ ಇಷ್ಟೊಂದು ಹೈಫೈ ಲೈಫ್ ಲೀಡ್ ಮಾಡೋಕೆ ಸಾಧ್ಯಾನಾ!? ಎಂಬ ಪ್ರಶ್ನೆ ಮೂಡದೇ ಇರದು.
ಇವನ ಆದಾಯ ಅಥವಾ ಹಣದ ಮೂಲವೇ ಸೀಕ್ರೆಟ್ ಆಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆತಗೂರು ಪಿಡಿಓನ ಬಿಂದಾಸ್ ದುನಿಯಾದ ಕಹಾನಿ ಒಂದೆರಡಲ್ಲ. ಆತಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಶಶಿಧರ್ @ ಶಶಿಗೌಡ, ಅಕ್ರಮ, ಭ್ರಷ್ಟಾಚಾರ ಆರೋಪದಡಿ ಈ ಹಿಂದೆ ಅಮಾನತ್ತಾಗಿದ್ದ ಪಿಡಿಓ ಎನ್ನಲಾಗಿದೆ.
ಈ ಹಿಂದೆ ಹಲಗೂರು ಗ್ರಾಪಂನಲ್ಲಿ ಸುಮಾರು 1 ಕೋಟಿಯಷ್ಟು ಅಕ್ರಮ ಅವ್ಯವಹಾರ ಮಾಡಿದ್ದ. ನೆಲಮಾಕನಹಳ್ಳಿ ಗ್ರಾಪಂನಲ್ಲೂ ಭ್ರಷ್ಟಾಚಾರ ನಡೆಸಿ ಅಮಾನತ್ತಾಗಿದ್ದ. ಇದೀಗ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅತಗೂರು ಗ್ರಾಪಂ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿರುವಾಗಲೇ ಕಾರು ಖರೀದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಇದೀಗ ಅಪ್ ಲೋಡ್ ಮಾಡಿದ್ದಾನೆ.
ಸರ್ಕಾರಿ ಅಧಿಕಾರಿಯಾಗಿದ್ದು, ಶಶಿಧರ್ ಸಿನಿಮಾ ಶೂಟಿಂಗ್ ಮಾಡ್ತಿದ್ದಾನೆ. ಬಿಲ್ಡರ್ ಎಂಬ ಹೆಸರಿನಲ್ಲಿ ತಾವೇ ಹೀರೊ ತಮ್ಮ ಪತ್ನಿಯೇ ಹೀರೊಯಿನ್ ಆಗಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಕಾರು ಖರೀದಿ ಮಾಡಿ ಸಿನಿಮಾ ಶೂಟಿಂಗ್ ಗಾಗಿ ಎಂಬಂತೆ ನಡೆದುಕೊಂಡ್ರಾ ಅಧಿಕಾರಿ ಎಂಬ ಗುಮಾನಿ ಮೂಡಿದ್ದು, ಪಿಡಿಒ ವಿರುದ್ದ ತನಿಖೆಗೆ ಜಿಲ್ಲಾಡಳಿತ ಮುಂದಾಗಿದೆ.