ಬೆಂಗಳೂರು: ದೇಶದ ವಿರುದ್ಧ ಮಾತನಾಡಿದರೆ ಜನರು ನಿಮ್ಮ ನಾಲಿಗೆ ಇಲ್ಲದಂತೆ ಮಾಡಬಹುದು ಎಂದು ಕಾಂಗ್ರೆಸ್ ನಾಯಕರಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
Advertisement
ಅವರ ಸ್ಥಾನದಲ್ಲಿ ನಾನು ಇದ್ದರೆ ಪಕ್ವತೆ ಇಲ್ಲದ ಪ್ರಶ್ನೆ ಕೇಳುತ್ತಿರಲಿಲ್ಲ. ದೇಶದ ವಿರುದ್ಧ ಮಾತನಾಡಿದರೆ ಜನರು ನಿಮ್ಮ ನಾಲಿಗೆ ಇಲ್ಲದಂತೆ ಮಾಡಬಹುದು ಎಂದು ಹೇಳಿದರು.
ಕೆಲವರ ಪ್ರಶ್ನೆಗಳು ಪಾಕಿಸ್ತಾನದ ಪರವಾಗಿವೆ. ನಿನ್ನೆ ತಾನೇ ಮೂವರು ಸತ್ತು ಬಿದ್ದಿದ್ದಾರೆ ಅಲ್ಲವೇ? ನಿಮಗೆ ಕಣ್ಣು ಕಾಣಲಿಲ್ಲವೇ? ನಿಮಗೇನಾದರೂ ಆಪರೇಷನ್ ಆಗಿದೆಯೇ? ನಿಮಗೆಲ್ಲ ವಿಶೇಷ ಆಸ್ಪತ್ರೆ ತೆರೆಯಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.