ಸಿನಿಮಾದಲ್ಲಿ ಚಾನ್ಸ್‌ ಬೇಕು ಅಂದ್ರೆ ಕಂಪನಿ ಕೊಡಬೇಕು ಅಂದ್ರು: ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ

0
Spread the love

ಕನ್ಯಾಕುಮಾರಿ ಹಾಗೂ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ಗಳ ಮೂಲಕ ಫೇಮಸ್‌ ಆಗಿರುವ ನಟಿ ಆಸಿಯಾ ಫಿರ್ದೋಸ್ ಸದ್ಯ ಸೀರಿಯಲ್‌ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ಆಸಿಯಾ ಸಿನಿಮಾ ರಂಗದಲ್ಲಿ ತಮಗಾದ ಕರಾಳ ಅನುಭವವನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

Advertisement

ಯೂಟ್ಯೂಬ್‌ ಚಾಲನ್‌ ಸಂದರ್ಶನದಲ್ಲಿ ಈ ವಿಚಾರಗಳನ್ನು ಹೇಳಿಕೊಂಡಿರುವ ಆಸಿಯಾ, ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್‌ ಕೌಚ್‌ ಅನ್ನ ತುಂಬಾ ಡೀಪ್‌ ಆಗಿ ನಾನು ನೋಡಿಲ್ಲ. ನಾನು ಕೆಲಸ ಮಾಡಿಕೊಂಡು ಬಂದಿರುವ ಎಲ್ಲ ಕಡೆ ಚೆನ್ನಾಗಿಯೇ ಇತ್ತು. ಆದರೆ ನನಗೆ ಇಂಡಸ್ಟ್ರಿ ಬಗ್ಗೆ ಅರಿವೇ ಇಲ್ಲದ ಟೈಮಲ್ಲಿ ಇದರ ಬಗ್ಗೆ ಏನೂ ಗೊತ್ತಿರಲಿಲ್ಲ. ಆರಂಭದಲ್ಲಿ ಒಬ್ರು ಅಂಕಲ್‌ ಪರಿಚಯವಾಗಿದ್ರು. ಅವರು ಸೀರಿಯಲ್‌ ಇಂಡಸ್ಟ್ರಿಯಲ್ಲಿ ತಕ್ಕಮಟ್ಟಿಗೆ ಸಂಪರ್ಕ ಹೊಂದಿದ್ರು. ಅವರಿಂದ ನನಗೆ ಆಡಿಷನ್‌ಗಳ ಮಾಹಿತಿ ಸಿಗಬಹುದು ಎಂದುಕೊಂಡಿದ್ದೆ. ಅವರೂ ಕೂಡ ನಿನ್ನೊಂದಿಗೆ ನಾನಿದ್ದೀನಿ ಅನ್ನೋ ಹಿರಿಯರ ಧೈರ್ಯದ ಫೀಲ್‌ ಕೊಟ್ರು. ಅವರನ್ನು ನಾನು ನನ್ನ ಕುಟುಂಬಕ್ಕೂ ಪರಿಚಯ ಮಾಡಿಕೊಟ್ಟೆ ಎಂದು ಹೇಳಿದ್ದಾರೆ.

ಆದರೆ, ಒಂದು ದಿನ ಶೂಟಿಂಗ್‌ ನಡೆಯುತ್ತಿದ್ದ ಜಾಗಕ್ಕೆ ಹೋಗಿದ್ದೆ. ಅಲ್ಲಿ ಒಂದು ರೂಂ ಇತ್ತು. ಆ ಅಂಕಲ್‌ ಬಂದು ನನ್ನ ಕೈ ಹಿಡಿದು ಜೋರಾಗಿ ಎಳೆದರು. ಅವರು ಕೈಹಿಡಿದ ವಿಧಾನದಲ್ಲೇ ನನಗೆ ಅದು ಸರಿಯಲ್ಲ ಅನ್ನೋದು ಅರ್ಥವಾಯ್ತು, ಕೊನೆಗೆ ನಾನು ಅಲ್ಲಿಂದ ಬಿಡಿಸಿಕೊಂಡು ಆಚೆ ಬಂದೆ, ಆಗ ನಾನಿನ್ನೂ ಚಿಕ್ಕವಳಾಗಿದ್ದೆ ಎಂದು ಆಸಿಯಾ ಕಹಿ ಘಟನೆ ಬಿಚ್ಚಿಟ್ಟಿದ್ದಾರೆ.

ನಾನು ಅವರು ಹೇಳಿದ್ದನ್ನೆಲ್ಲ ಕೇಳುವಷ್ಟು ದಡ್ಡಿ ಆಗಿರಲಿಲ್ಲ. ಅವರು ತಂದೆ ಸಮಾನದಲ್ಲಿದ್ದು ಆ ರೀತಿ ಮಾಡಲು ಪ್ರಯತ್ನ ಪಟ್ಟರು. ಆ ಘಟನೆ ಬಳಿಕ ನಾನು ಅವರನ್ನು ಭೇಟಿಯಾಗಲಿಲ್ಲ, ಮಾತೂ ಆಡಲಿಲ್ಲ. ಈ ವಿಚಾರವನ್ನು ಮನೆಯವರಿಗೂ ಹೇಳಿಬಿಟ್ಟೆ ಎಂದು ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.

ನಾನು ಸೀರಿಯಲ್‌ಗಳಲ್ಲಿ ನಟಿಸಿ, ಸಿನಿಮಾಗಳಲ್ಲೂ ನಟಿಸಿದೆ. ಈ ವೇಳೆ ಮತ್ತೊಬ್ಬ ವ್ಯಕ್ತಿ ಪರಿಚಯವಾಗಿ ನನ್ನ ಸಿನಿಮಾ ನೋಡಿದ್ದರು. ಅವರ ಸಿನಿಮಾ ಮಾಡುವ ಬಗ್ಗೆ ನನಗೆ ಹೇಳಿದ್ರು. ಇದರಲ್ಲಿ ನನಗೆ ಚಾನ್ಸ್‌ ಕೊಡೋ ಬಗ್ಗೆಯೂ ಮಾತನಾಡಿದ್ರು. ಅವರ ಆಫೀಸ್‌ಗೆ ಬರೋಕೆ ಹೇಳಿದ್ರು, ಮನೆ ಹತ್ರನೇ ಇದ್ದಿದ್ದರಿಂದ ನಾನು ಹೋದೆ. ಸಿನಿಮಾ ಕಥೆ ಹೇಳಿದ್ರು ನನಗೆ ಇಷ್ಟ ಆಗಿತ್ತು. ಆ ಟೈಮಲ್ಲಿ ನನಗೂ ಹಣಕಾಸಿನ ಅವಶ್ಯಕತೆ ಇದ್ದಿದ್ದರಿಂದ ಸಿನಿಮಾ ಮಾಡೋಣ ಎಂದು ಒಪ್ಪಿಕೊಂಡಿದ್ದೆ. ನನಗೆ ಪೇಮೆಂಟ್‌ ಕೇಳಿದರು. ಅವರು ತುಂಬಾ ಕಡಿಮೆ ಪೇಮೆಂಟ್‌ ಹೇಳಿದ್ರು, ನಾನು ಅದಕ್ಕೆ ಒಪ್ಪಲಿಲ್ಲ. ಆಗ ನಾನು ತೀರಾ ಜಾಸ್ತಿ ಕೂಡ ಕೇಳಲಿಲ್ಲ. ಕೊನೆಗೆ ಅವರೂ ಅದಕ್ಕೆ ಒಪ್ಪಿಕೊಂಡ್ರು. ನಿಮ್ಮ ವ್ಯಕ್ತಿತ್ವ ತುಂಬಾ ಒಳ್ಳೇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು ಎಂದು ಆಸಿಯಾ ಹೇಳಿದ್ದಾರೆ.

ಅವರು ನೀವು ನನ್ನ ಸಿನಿಮಾದಲ್ಲಿ ಕೆಲಸ ಮಾಡ್ತೀರಿ, ಇದರೊಂದಿಗೆ ನೀವು ನನಗೆ ಫ್ರೆಂಡ್‌ ಆಗಿರಬೇಕು ಎಂದು ಕೇಳಿದ್ರು. ನಾನು ಯಾವ ರೀತಿ ಫ್ರೆಂಡ್‌ ಎಂದು ಕೇಳಿದೆ. ಅದಕ್ಕೆ ಅವರು ನಾನು ಆಚೆ ಹೋದಾಗ, ಮೂವಿಗೆ ಜೊತೆಯಾಗಿ ಬರೋದು, ಕಂಪನಿ ಕೊಡೋದು ಅಂತ ಹೇಳಿದ್ರು. ಏನು ನಿಮ್‌ ಜೊತೆ ಮೂವಿಗೆ ಬರೋದಾ? ಅಂತ ಆವಾಗ ನನಗೆ ಎಲ್ಲ ಅರ್ಥ ಆಯ್ತು. ಎಷ್ಟು ಕೋಪ ಬಂತು ಅಂದ್ರೆ ನಿಮ್‌ ಜೊತೆ ಯಾಕೆ ನಾನು ಸಿನಿಮಾಗೆ ಬರಬೇಕು? ಎಂದು ಕೇಳಿದೆ. ನಾನು ಇಂಡಸ್ಟ್ರಿಗೆ ಬಂದಿರೋದು ಕೆಲಸ ಮಾಡೋಕೆ, ಫ್ರೆಂಡ್ಸ್‌ ಮಾಡಿಕೊಳ್ಳೋಕೆ ಅಲ್ಲ ಎಂದು ನೇರವಾಗಿ ಹೇಳಿದ್ದೆ ಎಂದು ತಮಗೆ ಎದುರಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here