ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ವಿದ್ಯುತ್ ಫ್ಯಾನ್ಗಳಿರುತ್ತದೆ. ಏರ್ ಕೂಲರ್ ಅಥವಾ ಎಸಿ ಖರೀದಿಸಲು ಸಾಧ್ಯವಾಗದೇ ಇರುವವರು ಬೇಸಿಗೆಯಲ್ಲಿ ಫ್ಯಾನ್ ಬಳಸುತ್ತಾರೆ. ಆದರೆ ಚಳಿಗಾಲದಲ್ಲಿ ಫ್ಯಾನ್ ಆನ್ ಮಾಡಿದರೆ, ಅದು ವೇಗವಾಗಿ ತಿರುಗದಿದ್ದರೂ ನಡೆಯುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಫ್ಯಾನ್ ಬೇಕೇ, ಬೇಕು. ಅದರಲ್ಲೂ ಫ್ಯಾನ್ ಜೋರಾಗಿ ತಿರುಗಬೇಕು, ಇಲ್ಲದಿದ್ದರೆ ಸೆಖೆ ತಡೆಯಲು ಆಗುವುದಿಲ್ಲ.
ಈ ಬೇಸಿಗೆ ಕಾಲದಲ್ಲಿ ಫ್ಯಾನ್ ಇಲ್ಲದ ಸ್ಥಳವೇ ಇಲ್ಲ. ನಿಮ್ಮ ಮನೆಯ ಫ್ಯಾನ್ ಕೂಡ ಶಬ್ದ ಮಾಡುತ್ತಿದೆ ಎಂದಾದರೆ ಅದಕ್ಕೆ ಪರಿಹಾರ ಇಲ್ಲಿದೆ.
ಕೆಲವೊಮ್ಮೆ ಫ್ಯಾನ್ ತುಂಬಾ ಜೋರಾಗಿ ಶಬ್ದ ಮಾಡುತ್ತದೆ. ಇದು ನಿದ್ರೆಗೆ ಭಂಗ ತರುತ್ತದೆ. ಅನೇಕ ಜನರು ಇದರಿಂದ ಬೇಸತ್ತು ಫ್ಯಾನ್ ಬದಲಾಯಿಸುತ್ತಾರೆ. ಆದರೆ ವಾಸ್ತವವಾಗಿ, ಅನೇಕ ಹಳೆಯ ಫ್ಯಾನ್‌ಗಳ ಸರ್ವೀಸಿಂಗ್ ಮತ್ತು ರಿಪೇರಿ ಮಾಡುವುದರಿಂದ ಫ್ಯಾನ್ ಧ್ವನಿಯನ್ನು ನಿಯಂತ್ರಿಸಬಹುದು.
* ಸೀಲಿಂಗ್ ಫ್ಯಾನ್ ಬ್ಲೇಡ್‌ಗಳ ಮೇಲೆ ಧೂಳು ಹೆಚ್ಚಾಗಿ ಸಂಗ್ರಹವಾಗುತ್ತದೆ. ಇದು ಫ್ಯಾನ್ ಚಾಲನೆಯಲ್ಲಿರುವಾಗ ಶಬ್ದವನ್ನು ಉಂಟುಮಾಡುತ್ತದೆ. ಸೀಲಿಂಗ್ ಫ್ಯಾನ್ ಬ್ಲೇಡ್‌ಗಳನ್ನು ಸ್ವಚ್ಛಗೊಳಿಸುವುದರಿಂದ ಫ್ಯಾನ್‌ನಿಂದ ಬರುವ ಶಬ್ದ ನಿಲ್ಲುತ್ತದೆ.
* ಸೀಲಿಂಗ್ ಫ್ಯಾನ್ ಬ್ಲೇಡ್‌ಗಳನ್ನು ಜೋಡಿಸುವ ಸ್ಕ್ರೂಗಳು ಸಹ ಕೆಲವೊಮ್ಮೆ ಸಡಿಲಗೊಳ್ಳಬಹುದು. ಇದರಿಂದಾಗಿಯೇ ಫ್ಯಾನ್ ಶಬ್ದ ಮಾಡುತ್ತದೆ. ಅದಕ್ಕಾಗಿಯೇ ನೀವು ಬ್ಲೇಡ್‌ಗಳ ಮೇಲಿನ ಸ್ಕ್ರೂಗಳನ್ನು ಬಿಗಿಗೊಳಿಸುವ ಮೂಲಕ ಈ ಸಮಸ್ಯೆಯನ್ನು ತಪ್ಪಿಸಬಹುದು.
* ಹಾಗೆಯೆ ಫ್ಯಾನ್ ಮೋಟಾರ್ ಹಾಳಾಗಿರುವುದರಿಂದ ಫ್ಯಾನ್ ಶಬ್ದ ಮಾಡಲು ಪ್ರಾರಂಭಿಸುತ್ತದೆ. ಸೀಲಿಂಗ್ ಫ್ಯಾನ್ ಮೋಟಾರ್ ಪರಿಶೀಲಿಸಲು ನೀವು ತಂತ್ರಜ್ಞರನ್ನು ಕರೆಯಬಹುದು.
* ಹಲವು ಬಾರಿ, ಫ್ಯಾನ್ ಬ್ಲೇಡ್‌ಗಳು ಬಾಗಿದಾಗಲೂ ಶಬ್ದ ಮಾಡಲು ಪ್ರಾರಂಭಿಸುತ್ತವೆ. ಇದಕ್ಕಾಗಿ ಫ್ಯಾನ್ ಬ್ಲೇಡ್‌ಗಳನ್ನು ನೇರಗೊಳಿಸಿ.
* ಕೆಲವೊಮ್ಮೆ ಸೀಲಿಂಗ್ ಫ್ಯಾನ್‌ನಲ್ಲಿರುವ ಎಣ್ಣೆ ಒಣಗಿ ಹೋಗಿರುವುದರಿಂದ ಫ್ಯಾನ್ ಶಬ್ದ ಮಾಡುತ್ತದೆ. ಫ್ಯಾನ್‌ನ ಎಲ್ಲಾ ಭಾಗಗಳಿಗೂ ಸ್ವಲ್ಪ ಎಣ್ಣೆ ಹಚ್ಚಿ.
ಈ ಮೂಲಕ ಫ್ಯಾನ್ ನಲ್ಲಿ ಬರುವ ಶಬ್ದ ತಡೆಗಟ್ಟಬಹುದು.