ಲಕ್ಷ್ಮೇಶ್ವರ: ಬೆಳಗಾವಿ ಉತ್ತರ ವಲಯದ ಐಜಿಪಿ ಡಾ. ಚೇತನಸಿಂಗ್ ರಾಥೋಡ ಅವರು ಸೋಮವಾರ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು. ಈ ವೇಳೆ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡರ ಅವರೊಂದಿಗೆ ಪೊಲೀಸ್ ಠಾಣೆಯ ಹಿಂಬದಿಯಲ್ಲಿ ಸಸಿ ನೆಟ್ಟು ನೀರೆರೆದು ಪೋಷಿಸುವಂತೆ ಪಿಎಸ್‌ಐ ನಾಗರಾಜ ಗಡದ ಅವರಿಗೆ ಸೂಚಿಸಿದರು. ಪಿಎಸ್‌ಐ ಟಿ.ಕೆ. ರಾಠೋಡ ಸೇರಿದಂತೆ ಸಿಬ್ಬಂದಿಗಳಿದ್ದರು.
Advertisement