ಚಾಮರಾಜನಗರ: ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತೆರಕಣಾಂಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ತೆರಕಣಾಂಬಿಯ ನಯಾಜ್ (26), ರೋಷನ್ (27) ಬಂಧಿತ ಆರೋಪಿಗಳಾಗಿದ್ದು, ತೆರಕಣಾಂಬಿ ಹೋಬಳಿಯ ಸೋಮನಪುರ ಕಡೆಯಿಂದ ಮಾದಲವಾಡಿ ಮಾರ್ಗವಾಗಿ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಈ ವೇಳೆ ತೆರಕಣಾಂಬಿಯ ಪೊಲೀಸರಿಂದ ದಿಡೀರ್ ದಾಳಿ ಮಾಡಿದ್ದು, ಗೂಡ್ಸ್ ವಾಹನ ತಡೆದು ಪರಿಶೀಲಿಸಿದ್ದಾರೆ. ವಾಹನದಲ್ಲಿ ಎರಡು ಎತ್ತು ಹಾಗೂ ಒಂದು ಕರು ಇರುವುದು ಕಂಡುಬಂದಿದೆ. ಕೂಡಲೆ ಮಾಲು ಸಮೇತ ಆರೋಪಿಗಳನ್ನು ಬಂಧಿಸಿ ತೆರಕಣಾಂಬಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ಮಾಡಲಾಗಿದೆ.



