ಗದಗ:- ಬಡ್ಡಿ ಹಣಕ್ಕಾಗಿ ಉದ್ಯಮಿಯೊಬ್ಬನನ್ನು ಕೂಡಿ ಹಾಕಿ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಐವರನ್ನು ಗದಗ ಜಿಲ್ಲೆಯ ಬೆಟಗೇರಿ ಪೊಲೀಸರು ವಶಕ್ಕೆ ಮಾಡಿದ್ದಾರೆ.
ಗದಗನ ನಗರದ ಮುಳಗುಂದ ನಾಕಾದಲ್ಲಿನ ಮಂಜುನಾಥ ರೆಸಿಡೆನ್ಸಿಯಲ್ಲಿ ಬಡ್ಡಿ ಹಣಕ್ಕಾಗಿ ಉದ್ಯಮಿ ವಾದಿರಾಜ್ ಹುಯಿಲಗೋಳ ಮೇಲೆ ದುಷ್ಕರ್ಮಿಗಳು, ರೂಂ ನಲ್ಲಿ ಕೂಡಿಹಾಕಿ ಬಿಯರ್ ಬಾಟಲಿ ಯಿಂದ ಹಲ್ಲೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಾದಿರಾಜ್ ಅವರು, ಸುಮಾರು 9ಜನರ ವಿರುದ್ಧ ದೂರು ದಾಖಲಿಸದ್ದು. ದೂರಿನ ಅನ್ವಯ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಇದೀಗ ಅಕ್ರಮ ಬಡ್ಡಿ ದಂದೆಕೋರರ ರಾಜು ವಿಠ್ಠಲ್ಕರ್ ಸೇರಿ ಐದು ಜನರನ್ನು ವಶಕ್ಕೆ ಪಡೆಯಲಾಗಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಅಟ್ಟಹಾಸ ಮಿತಿಮಿರಿದೆ. ಬಗೆದಷ್ಟು ಬಡ್ಡಿ ಬಕಾಸುರರ ಚರಿತ್ರೆಗಳು ಹೊರಬರ್ತಾಯಿವೆ. ಇತ್ತೀಚೆಗೆ ಬಡ್ಡಿ ದಂಧೆಕೋರ ಯಲ್ಲಪ್ಪ ಮಿಸ್ಕಿನ್ ಅವರ ಅಪಾರ ಸಂಪತ್ತು ಜಪ್ತಿ ಮಾಡಿ, ಬಡ್ಡಿ ದಂಧೆಕೋರರಿಗೆ ಪೊಲೀಸರು ಶಾಕ್ ನೀಡಿದ್ರು.
ಆದ್ರೆ ಈವಾಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.. ಅಂದ ಹಾಗೇ ಗದಗ ನಗರದ ನಿವಾಸಿ, ಶಿಕ್ಷಣ ಸಂಸ್ಥೆ ಹೊಂದಿರೋ
ಹಾಗೂ ಉದ್ಯಮಿ ಆಗಿರೋ ವಾದಿರಾಜ್ ದಿರೇಂದ್ರ ಹುಯಿಲಗೋಳ ಮೇಲೆ ಬಡ್ಡಿ ದಂಧೆಕೋರರು ಅಟ್ಟಹಾಸ ಮೆರೆದಿದ್ದಾರೆ.
ವ್ಯವಹಾರಕ್ಕಾಗಿ ಮಂಜುನಾಥ್ ಪಲದೊಡ್ಡಿ, ರಾಜು ವಿಠ್ಠಲ್ಕರ್ ಸೇರಿದಂತೆ ಹಲವರ ಹತ್ತಿರ 32 ಲಕ್ಷ ರೂಪಾಯಿ ಸಾಲವನ್ನಾಗಿ ಪಡೆದುಕೊಂಡಿದ್ದ. ಇದು ವಾರಕ್ಕೆ 100 ನೂರಕ್ಕೆ 10 ರೂಪಾಯಿ ಬಡ್ಡಿ ಹಾಗೇ, 8 ತಿಂಗಳು ಸರಿಯಾಗಿ ಬಡ್ಡಿ ಅಸಲು ನೀಡ್ತಾ ಬಂದು ಸುಮಾರು 25 ಲಕ್ಷ ರೂಪಾಯಿ ಮರುಪಾವತಿ ಮಾಡಿದ್ದಾರೆ.
ಆದ್ರೆ ಎರಡು ತಿಂಗಳು ಹಣ ಕಟ್ಟಲು ಆಗಿಲ್ಲಾ. ಹೀಗಾಗಿ ಬಡ್ಡಿ ದಂಧೆಕೋರರ ಟೀಮ್, ಇದೆ ವಾದಿರಾಜ್ ನನ್ನು ಪುಸಲಾಯಿಸಿ ಕರೆದುಕೊಂಡು ಬಂದಿದ್ದಾರೆ. ಗದಗನ ವೆಂಕಟೇಶ ಚಿತ್ರಮಂದಿರ ಬಳಿ ಕರೆದುಕೊಂಡು ಬಂದಿದ್ದಾರೆ. ಅಲ್ಲಿಂದ ಗದಗ ನಗರದ ಖಾಸಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಮಂಜುನಾಥ್ ಫಲದೊಡ್ಡಿ, ರಾಜು ಸೇರಿದಂತೆ ಒಂಬತ್ತು ಜನ್ರ ಟೀಮ್, ವಾದಿರಾಜ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರಂತೆ. ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಫೆಬ್ರವರಿ 14 ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ವಾದಿರಾಜ್ ಹುಯಿಲಗೋಳ ದೂರು ನೀಡಿದ್ದಾರೆ.
ದೂರ ಹಿನ್ನಲೆಯಲ್ಲಿ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ಏಕಾಕಾಲಕ್ಕೆ ಐದು ಜನರ ಮನೆ ಮೇಲೆ ದಾಳಿ ಮಾಡಿದ್ದಾರೆ. ಬಡ್ಡಿ ದಂಧೆಕೋರರಾದ ಮಂಜುನಾಥ ಪಲದೊಡ್ಡಿ, ರಾಜು, ಯೂನಸ್, ವೆಂಕಟೇಶ, ಅಜಯ್ ಪವಾರ್, ವಾಸೀಮ್ ಸೇರಿದಂತೆ ಒಂಬತ್ತು ಜನರ ವಿರುದ್ಧ ದೂರು ದಾಖಲಾಗಿದೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ. ಮಂಜುನಾಥ್ ಪಲದೊಡ್ಡಿ, ರಾಜು ಸೇರಿದಂತೆ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲಾ ಒಂದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಖಾಲಿ ಬಾಂಡ್ ಹಾಗೂ ಚೆಕ್ ನಲ್ಲಿ ಒತ್ತಾಯ ಪೂರ್ವಕವಾಗಿ ಸಹಿ ಕೂಡ ಮಾಡಿಸಿಕೊಂಡಿದ್ದಾರೆ.. ಅಕ್ರಮವಾಗಿ ಬಡ್ಡಿ ದಂಧೆ ಮಾಡ್ತಾಯಿದ್ದು, ಹೆಚ್ಚಿನ ಬಡ್ಡಿಗೆ ಹಣ ನೀಡಿದ್ದು ಮೇಲ್ನೋಟಕ್ಕೆ ಕಂಡು ಬರ್ತಾಯಿದೆ, ಪ್ರಕರಣ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಬಿ.ಎಸ್ ನೇಮಗೌಡ ಹೇಳಿದ್ದಾರೆ.