ಬೆಂಗಳೂರು: ಅಕ್ರಮ ಮುಸ್ಲಿಂ ವಲಸಿಗರು ಪುರುಸೊತ್ತಿಲ್ಲದೇ ಮಕ್ಕಳನ್ನು ಹೆರುತ್ತಲೇ ಇರುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಬೆಂಗಳೂರಿನ ಮಹಾದೇವಪುರ ಕ್ಷೇತ್ರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಹಿಂಗ್ಯಾ ಮುಸ್ಲಿಮರು, ಪಾಕ್ ಮುಸ್ಲಿಮರು ಭಾರತಕ್ಕೆ ಬರಲಿ ಎನ್ನುವ ಮನಸ್ಥಿತಿ ಕಾಂಗ್ರೆಸ್ ನವರದ್ದು.
Advertisement
ನಮ್ಮ ಮಹಿಳೆಯರಿಗೆ ಒಂದು ಮಗುವನ್ನು ಹೆರೋದ್ರೊಳಗೆ ಸೊಂಟ ಬಿದ್ದು ಹೋಗುತ್ತದೆ. ಆದರೆ ಅಕ್ರಮ ಮುಸ್ಲಿಂ ವಲಸಿಗರು ಪುರುಸೊತ್ತಿಲ್ಲದೇ ಮಕ್ಕಳನ್ನು ಹೆರುತ್ತಲೇ ಇರುತ್ತಾರೆ.
ಈ ವಲಸಿಗರು ಭಾರತದಲ್ಲಿದ್ರೆ ನಮ್ಮ ಜಾಗ ಕಬಳಿಸ್ತಾರೆ. ಭಯೋತ್ಪಾದನೆ ಜತೆಗೆ ಪುರುಸೊತ್ತಿಲ್ಲದೇ ಜನೋತ್ಪಾದನೆ ಮಾಡ್ತಾರೆ. ಹಿಂದೂಗಳಿಗೆ ಇರೋದು ಒಂದೇ ದೇಶ, ನಮಗೆ ಯಾರೂ ಆಶ್ರಯ ಕೊಡಲ್ಲ. ಭಾರತವನ್ನು ಭಾರತವಾಗಿ ಉಳಿಸಿಕೊಳ್ಳಬೇಕು ಎಂದಿದ್ದಾರೆ.