ಬೆಂಗಳೂರು:- ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ ಸೋಮಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ.
Advertisement
ಸಚಿವ ಸೋಮಣ್ಣ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣವನ್ನು ನಗರದ 91ನೇ ಸಿಸಿಹೆಚ್ ಕೋರ್ಟ್ ವಜಾಗೊಳಿಸಿದೆ.
2013ರಲ್ಲಿ ರಾಮಕೃಷ್ಣ ಎಂಬುವವರು ಖಾಸಗಿಯಾಗಿ ದೂರು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ನ್ಯಾ.ಸಂತೋಷ್ ಗಜಾನನ ಭಟ್ ಅವರಿಂದ ಏಕಸದಸ್ಯ ಪೀಠ, ರಾಮಕೃಷ್ಣ ಅವರ ಆರೋಪಕ್ಕೆ ಪೂರಕ ಸಾಕ್ಷಿ ಇಲ್ಲವೆಂದು ಪಿಸಿಆರ್ ಅನ್ನು ವಜಾಗೊಳಿಸಿದೆ.
ಈ ಮೂಲಕ ಕೇಂದ್ರ ಸಚಿವ ವಿ ಸೋಮಣ್ಣಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.