ಅಕ್ರಮ ಪಡಿತರ ಅಕ್ಕಿ ವಶಕ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಪಟ್ಟಣದ ಸಮೀಪ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ಟಾಟಾ ಏಸ್ ವಾಹನದಲ್ಲಿ ಅನಧಿಕೃತವಾಗಿ ಪಾಸ್/ಪರ್ಮಿಟ್ ಇಲ್ಲದೇ ಸರ್ಕಾರದಿಂದ ವಿತರಣೆಯಾಗುವ 11 ಕ್ವಿಂಟಾಲ್ 33 ಕೆಜಿ ತೂಕದ 26059 ರೂ ಕಿಮ್ಮತ್ತಿನ ಪಡಿತರ ಅಕ್ಕಿಯನ್ನು 23 ವಿವಿಧ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಡಲು ಬೆಳ್ಳಟ್ಟಿ ಕಡೆಯಿಂದ ಸಾಗಿಸುತ್ತಿದ್ದ ಸಂದರ್ಭದಲ್ಲಿ ಆಹಾರ ನಿರೀಕ್ಷಕಿ ಮಂಜುಳಾ ಆಕಳದ ಅಕ್ಕಿಯನ್ನು ವಶಪಡಿಸಿಕೊಂಡು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಶಿರಹಟ್ಟಿ ಪಿಎಸ್‌ಐ ಈರಪ್ಪ ರಿತ್ತಿ, ಗ್ರಾಮಲೆಕ್ಕಾಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Spread the love

LEAVE A REPLY

Please enter your comment!
Please enter your name here