ದಾವಣಗೆರೆ:- ಬಿಜೆಪಿ ಹಿರಿಯ ಶಾಸಕ ಬಿಪಿ ಹರೀಶ್ ಅವರು ದಾವಣಗೆರೆ ಎಸ್‌ಪಿಯನ್ನು ನಾಯಿಗೆ ಹೋಲಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಬಿಪಿ ಹರೀಶ್, ಎಸ್‌ಪಿ ಉಮಾ ಪ್ರಶಾಂತರನ್ನು ನಾಯಿಗೆ ಹೋಲಿಸಿದ್ದಾರೆ. ದಾವಣಗೆರೆ ಎಸ್‌ಪಿ ಪೊಮೇರಿಯನ್ ನಾಯಿ ತರಾ ವರ್ತನೆ ಮಾಡ್ತಾರೆ. ಶಾಮನೂರು ಫ್ಯಾಮಿಲಿಗೆ ಪೊಮೇರಿಯನ್ ನಾಯಿ ತರಾ ವರ್ತನೆ ಮಾಡ್ತಾರೆ ಎನ್ನುವ ಮೂಲಕ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ ವಿರುದ್ಧ ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ಕಿಡಿಕಾರಿದರು. ಆದ್ರೆ, ಈ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಾವು ಯಾವುದೇ ಸಭೆಗೆ ಬಂದ್ರೆ ನಮ್ಮ ಕಡೆ ತಿರುಗಿಯು ಕೂಡ ನೋಡಲ್ಲ, ಆದರೆ ಅವರ ಮನೆ ಮುಂದೆ ಗಂಟೆಗಟ್ಟಲೆ ಕಾದು ಪೊಮೇರಿಯನ್ ನಾಯಿ ತರಾ ಇರ್ತಾರೆ. ಹರಿಹರ ಸಭೆಗೆ ಬಂದಾಗ ನಮ್ಮ ಕಡೆ ನೋಡದೆ ಮುಖ ತಿರುಗಿಸಿಕೊಂಡು ಕೂತರು. ಕೂರಬೇಕಾ ಬೇಡ್ವಾ ಅಂತ ಪಕ್ಕದಲ್ಲಿ ಮುಖ ತಿರುಗಿಸಿಕೊಂಡು ಕೂತರು. ನಾನು ಪಕ್ಕದಲ್ಲೆ ಇದ್ದ DYSP ಗೆ ಇವೇರೆನು ಶಾಮನೂರು ಮನೆಯ ಪೊಮೇರಿಯನ್ ನಾಯಿನಾ ಅಂತ ಕೇಳಿದೆ. ಎಸ್ಪಿ ಅವರಿಗೆ ಕೇಳುವ ಹಾಗೆ ಹೇಳಿದೆ ಅಂತ ಅಸಮಾಧಾನ ಹೊರಾಹಾಕಿದ್ದಾರೆ. ಎಸ್ಪಿ ಉಮಾ ಪ್ರಶಾಂತ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸುವ ಭರದಲ್ಲಿ ಹರೀಶ್ ಈ ಹೇಳಿಕೆ ನೀಡಿದ್ದಾರೆ.