ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ 9 ವಿದೇಶಿಗರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೈಜೀರಿಯಾದ ನಾಲ್ವರು ಪ್ರಜೆಗಳು, ಘಾನಾದ ಇಬ್ಬರು ಪ್ರಜೆಗಳು, ಸುಡಾನ್ ದೇಶದ ಓರ್ವ ಪ್ರಜೆ ಸೇರಿದಂತೆ ಒಟ್ಟು ಒಂಬತ್ತು ವಿದೇಶಿಗರು ಬಂಧಿತರು.
Advertisement
ಬಂಧಿತರು ಪಾಸ್ ಪೋರ್ಟ್, ವೀಸಾ ಅವಧಿ ಮುಗಿದಿದ್ದರೂ ಸಹ ಅಕ್ರಮವಾಗಿ ನಗರದಲ್ಲಿ ವಾಸಗಿದ್ದರು. ಇನ್ನು ಬಂಧಿತರನ್ನು ಡಿಟೆನ್ಷನ್ ಸೆಂಟರ್ ನಲ್ಲಿ ಇಡಲಾಗಿಗಿದ್ದು, ಸದ್ಯ ಬಂಧನ ಮಾಡಿರುವವರನ್ನು ಅವರವರ ದೇಶಕ್ಕೆ ವಾಪಸ್ ಕಳಿಸುವ ಪ್ರಕ್ರಿಯೆ ನಡೆದಿದೆ.
ವಿದ್ಯಾಭ್ಯಾಸ ಹಾಗೂ ಇನ್ನಿತರ ಉದ್ದೇಶಕ್ಕಾಗಿ ಬೆಂಗಳೂರಿಗೆ ಬಂದು ವೀಸಾ ಅವಧಿ ಮುಗಿದರೂ ಇಲ್ಲೇ ನೆಲೆಸುತ್ತಿರುವ ವಿದೇಶಿಗರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ನಗರ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.