ತುಮಕೂರು: ಅಮಲು ಬರಿಸುವ ಮಾತ್ರೆಗಳನ್ನು ಮಾರಾಟ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ತಿಲಕ್ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ಖಾದರ್ , ಬಿರೇಶ್ ಬಂಧೀತ ಆರೋಪಿಗಳಾಗಿದ್ದು, ತುಮಕೂರು ನಗರದ ನಿವಾಸಿಗಳಾಗಿದ್ದಾರೆ. ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಅಕ್ರಮವಾಗಿ ಅಮಲು ಬರಿಸುವ ಮಾತ್ರೆಗಳನ್ನು ಮಾರಾಟ ಮಾಡ್ತಿದ್ದರು.
Advertisement
ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕದ್ದು ಮುಚ್ಚಿ ಅಕ್ರಮವಾಗಿ ಮಾರಾಟ ಮಾಡ್ತಿದ್ದರು ಎಂಬ ಮಾಹಿತಿ ಮೇರೆಗೆ ತಿಲಕ್ ಪಾರ್ಕ್ ಪೊಲೀಸರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 56 ಸಾವಿರ ಬೆಲೆ ಬಾಳುವ 1700 ಮಾತ್ರೆಗಳ ವಶಕ್ಕೆ ಪಡೆದಿದ್ದು, ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.