ಹುಬ್ಬಳ್ಳಿ:- ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಸರ್ಕಾರದ ಹಣ ವರ್ಗಾವಣೆ ಮಾಡಿದ ಪಿಡಿಓ ಸಸ್ಪೆಂಡ್ ಮಾಡಿ ಧಾರವಾಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
Advertisement
ಕಳೆದ ಆ.31ರಂದು ಗಳಗಿಹುಲಕೊಪ್ಪ ಗ್ರಾಮದಲ್ಲಿನ ಕರೆಂಟ್ ಬಿಲ್ ಹಗರಣವನ್ನು ಮಾಧ್ಯಮಗಳು ಬಯಲಿಗೆಳೆದಿತ್ತು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಓ ಅಬ್ದುಲ್ ರಜಾಕ್ ಹೆಚ್ ಮನಿಯಾರ್ ಸರ್ಕಾರದ ದುಡ್ಡನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡುತ್ತಿರುವ ಕುರಿತು ಸವಿಸ್ತಾರವಾಗಿ ಮಾಧ್ಯಮಗಳು ವರದಿ ಬಿತ್ತರಿಸಿತ್ತು.
ಮಾಧ್ಯಮಗಳ ವರದಿಗೆ ಎಚ್ಚೆತ್ತ ಜಿಪಂ ಸಿಇಓ ಭುವನೇಶ್ವರ ಅವರು ವಿಚಾರಣೆ ನಡೆಸಿ ಗ್ರಾಮ ಪಂಚಾಯಿತಿ ಪಿಡಿಓ ಅಬ್ದುಲ್ ರಜಾಕ್ ಹೆಚ್ ಮನಿಯಾರ್ ಅನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.