ಅಕ್ರಮ ಸಾಗಾಟ: ಬೆಂಗಳೂರಿನಲ್ಲಿ 1.5 ಟನ್ ನಷ್ಟು ಗೋಮಾಂಸ ಪತ್ತೆ!

0
Spread the love

ಬೆಂಗಳೂರು:- ನಗರದಲ್ಲಿ ಅಕ್ರಮ ಗೋಮಾಂಸ ಸಾಗಾಟ ದಂಧೆ ಬೆಳಕಿಗೆ ಬಂದಿದೆ. 1.5 ಟನ್ ನಷ್ಟು ಗೋಮಾಂಸ ಅಮೃತಹಳ್ಳಿ ಮತ್ತು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಇಂದು ಪತ್ತೆಯಾಗಿದೆ.

Advertisement

ಚಿಕ್ಕಬಳ್ಳಾಪುರದ ಅಲ್ಲಿಪುರ ಕಸಾಯಿಖಾನೆಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ವಾಹನಗಳನ್ನು ಪೊಲೀಸರು ಅಡ್ಡಗಟ್ಟಿ ಹಿಡಿದಿದ್ದಾರೆ. ಕೆ.ಆರ್.ಪುರಂ ಕಡೆಗೆ ಸಾಗಿಸುತ್ತಿದ್ದ ಟವೆರಾ ವಾಹನವನ್ನು ಅಮೃತಹಳ್ಳಿ ಪೊಲೀಸರು, ಹೆಬ್ಬಾಳ ಫ್ಲೈಓವರ್ ಬಳಿ ಅಡ್ಡಗಟ್ಟಿ ಹಿಡಿದಿದ್ದಾರೆ. 6 ಹಸು, 16 ಕರು ವಧೆ ಮಾಡಿ ಮಾಂಸ ಸಾಗಿಸಲಾಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಸದ್ಯ ಪೊಲೀಸರು, ಚಾಲಕ ಥವೆರಾ ಖಾನ್​ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಇನ್ನೂ ಕೆಟ್ಟು ನಿಂತಿದ್ದ ಫೋರ್ಡ್ ಕಾರಿನಲ್ಲೂ ಗೋಮಾಂಸ ಪತ್ತೆಯಾಗಿರುವ ಘಟನೆ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಸುಮಾರು 500 ಕೆಜಿಯಷ್ಟು ಗೋಮಾಂಸ ಇದ್ದ ಕಾರನ್ನು ಚಿಕ್ಕಜಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕಾರಿನ ಸಂಖ್ಯೆ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಚಿಕ್ಕಜಾಲ ಮತ್ತು ಅಮೃತಹಳ್ಳಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಲಾಗಿದ್ದು, ಈ ಬಗ್ಗೆ ಪೊಲೀಸರು ಸಹ ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here