ಬೀದರ್:- ಸಿನಿಮಾ ಶೈಲಿಯಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೀದರ್ ನಲ್ಲಿ ಜರುಗಿದೆ.
ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತ್ರಿಪುರಾಂತ ಬಳಿ ಘಟನೆ ಜರುಗಿದ್ದು, ಬಂಧಿತನಿಂದ 16 ಲಕ್ಷ ಮೌಲ್ಯದ ಒಂದು ಕ್ವಿಂಟಾಲ್ ಶ್ರೀಗಂಧದ ತುಂಡು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಯು, ಸಿನಿಮಾ ಸ್ಟೈಲಿನಲ್ಲಿ ಶ್ರೀಗಂಧ ಮರದ ತುಂಡುಗಳನ್ನ ಕತ್ತರಿಸಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮೂಡಬಿ ಕ್ರಾಸ್ ಬಳಿ ನವೆಂಬರ್ 28 ರಂದು ಸಂಜೆ 04:30 ರ ಸುಮಾರಿಗೆ ಬುಲೆರೋ ವಾಹನದಲ್ಲಿ ಸುಮಾರು 100 ಕೆಜಿ ತೂಕದ ಶ್ರೀಗಂಧದ ಮರದ ತುಂಡುಗಳನ್ನ ಯಾವುದೇ ಪರವಾನಿಗೆ ಇಲ್ಲದೆ ಖದೀಮ ಸಾಗಾಟ ಮಾಡುತ್ತಿದ್ದ. ವಿಷಯ ತಿಳಿದು ಪೊಲೀಸರು ದಾಳಿ ಮಾಡಿ ಶ್ರೀಗಂಧ ಸಮೇತ ಖದೀಮರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಖದೀಮರು ಶ್ರೀಗಂಧದ ಮರಕ್ಕೆ ಕನ್ನ ಹಾಕಿ, ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದಾರೆ. ಆದರೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಖದೀಮನ ಪ್ಲ್ಯಾನ್ ತಲೆಕೆಳಗಾಗುವಂತೆ ಮಾಡಿದ್ದು, ಮಾಲ್ ಸಮೇತ ಬಂಧಿಸಿದ್ದಾರೆ.