ಚಿಕ್ಕಬಳ್ಳಾಪುರ:- ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ಮಹಿಳೆಯ ಕಾಟ ತಾಳಲಾರದೇ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
19 ವರ್ಷದ ನಿಕಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮಹಿಳೆಯ ಕಾಮದಾಟಕ್ಕೆ ಯುವಕ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ನಿಖಿಲ್ 38 ವರ್ಷದ ಮಹಿಳೆ ಶಾರದಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೇಳಿಬಂದಿದೆ.
ಹಲವು ವರ್ಷಗಳ ಹಿಂದೆಯೇ ಗಂಡನಿಂದ ವಿಚ್ಛೇದನ ಪಡೆದಿದ್ದ ಶಾರದಾ ಇಬ್ಬರು ಮಕ್ಕಳೊಂದಿಗೆ ಮೂಡಚಿಂತಹಳ್ಳಿ ಗ್ರಾಮದಲ್ಲಿ ವಾಸವಿದ್ದಳು. ನಿಖಿಲ್ ಪೋಷಕರ ವಿರೋಧದ ನಡುವೆಯೂ ಯುವಕನನ್ನ ಬಿಡದ ಶಾರದಾ, ಆಗಾಗ್ಗೆ ಯುವಕನನ್ನ ಹೊರಗೆ ಕರೆದೊಯ್ಯುತ್ತಿದ್ದಳಂತೆ. ಜೊತೆಗೆ ನಿಖಿಲ್ ಜೊತೆಗೆ ಈಕೆ ಆಡಿರುವ ರಾಸಲೀಲೆಯ ಫೋಟೋಗಳು ಲಭ್ಯವಾಗಿದ್ದು, ಅಕ್ರಮ ಸಂಬಂಧ ಹೊಂದಿರುವ ಆರೋಪ ಕೇಳಿಬಂದಿದೆ.
ಚಿಂತಾಮಣಿಯ ಕಾಚಹಳ್ಳಿ ಕೆರೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಪೋಷಕರು ಶಾರದಾ ವಿರುದ್ಧ ದೂರು ನೀಡಿದ್ದಾರೆ. ಪೋಲೀಸರು ತನಿಖೆ ಕೈಗೊಂಡಿದ್ದಾರೆ.


