ಬೀದರ್:- ಆಂಟಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನ ಮಾರ್ಮಾಂಗವನ್ನು ಮಹಿಳೆ ಕುಟುಂಬಸ್ಥರು ಕಟ್ ಮಾಡಿರೋ ಘಟನೆ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದಲ್ಲಿ ಜರುಗಿದೆ.
28 ವರ್ಷದ ಸುನೀಲ್ ಎಂಬಾತನ ಮರ್ಮಾಂಗಕ್ಕೆ ಮಹಿಳೆ ಕುಟುಂಬಸ್ಥರು ಕತ್ತರಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಆಂಟಿ ಬಳಿ ತೆರಳಿದ್ದಾಗ ಸುನಿಲ್ ಲಾಕ್ ಆಗಿದ್ದ. ಈ ವೇಳೆ ಯುವಕನನ್ನ ಲಾಕ್ ಮಾಡಿ, ಮಹಿಳೆ ಕುಟುಂಬಸ್ಥರು ಕೂಡಿ ಹಾಕಿದ್ದರು.
ಬಳಿಕ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನ ಮೇಲೆ ಹಲ್ಲೆ ನಡೆಸಿದ ಮಹಿಳೆ ಪತಿ, ಆತನ ಮರ್ಮಾಂಗವನ್ನೇ ಕಟ್ ಮಾಡಿ ಅನೈತಿಕ ಸಂಬಂದಕ್ಕೆ ಬ್ರೇಕ್ ಹಾಕಿದ್ದಾನೆ.
ಇದೀಗ ಮಹಿಳೆ ಪತಿ ವಿರುದ್ದ ಮುನ್ನಾಏಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಆರೆಸ್ಟ್ ಮಾಡಲಾಗಿದೆ. ಗಾಯಾಳು ಸುನಿಲ್ ತನ್ನ ಮರ್ಮಾಂಗದ ಜೊತೆ ಬೀದರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.