ಸಂಬಂಧಿಯೊಂದಿಗೆ ಅಕ್ರಮ ಸಂಬಂಧ: ವಿವಾಹಿತ ಮಹಿಳೆಯನ್ನು ಮಂಚಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಕಿರುಕುಳ!

0
Spread the love

ಹೈದರಾಬಾದ್:- ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಅಮಾನುಷ ಕೃತ್ಯ ಒಂದು ನಡೆದಿದೆ. ಮದುವೆಯಾಗಿರುವ ಮಹಿಳೆಯೊಬ್ಬಳು ಸಂಬಂಧಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆಕೆಯನ್ನು ವಿವಸ್ತ್ರಗೊಳಿಸಿ ಮಂಚಕ್ಕೆ ಕಟ್ಟಿ, ತಲೆ ಬೋಳಿಸಿ ಖಾಸಗಿ ಅಂಗಗಳಿಗೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

Advertisement

ಹಲ್ಲೆಯಿಂದಾಗಿ ಮಹಿಳೆಯ ಖಾಸಗಿ ಅಂಗಗಳಲ್ಲಿ ರಕ್ತಸ್ರಾವವಾಗಿದೆ. ಮಹಿಳೆ ಬಿಟ್ಟು ಬಿಡುವಂತೆ ಬೇಡಿಕೊಂಡರು ಚಿತ್ರಹಿಂಸೆ ನೀಡಿದ್ದಾರೆ. ರವಿ ಎಂಬಾತ ಸಂಬಂಧಿ ಮಹಿಳೆಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದ. ಘಟನೆಗೆ 10 ದಿನಗಳ ಮೊದಲು ಇಬ್ಬರು ನಾಪತ್ತೆಯಾಗಿದ್ದರು. ಈ ಇಬ್ಬರು ಸಿಕ್ಕಿಬಿದ್ದ ಬಳಿಕ ಅವರ ಮೇಲೆ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಕನಿಷ್ಠ 14 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here