ಬೆಂಗಳೂರು:- ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ಇಂದು ವಿಧಿವಶರಾಗಿದ್ದಾರೆ. ಈ ಮೂಲಕ ನಟಿ ಅಮೂಲ್ಯ ಕುಟುಂಬಕ್ಕೆ ಆಘಾತ ಉಂಟಾಗಿದೆ.
Advertisement
42 ವರ್ಷದ ದೀಪಕ್, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ದೀಪಕ್ ಅರಸು ಅವರಿಗೆ ಎರಡು ಕಿಡ್ನಿ ವೈಫಲ್ಯವಾದರಿಂದ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ಸದ್ಯ ದೀಪಕ್ ಅರಸು ಪಾರ್ಥಿವ ಶರೀರ ಆಸ್ಪತ್ರೆಯಲ್ಲಿದ್ದು, ಶೇಷಾದ್ರಿಪುರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.