HomeKarnataka Newsಶರಣಾದ ನಕ್ಸಲರಿಗೆ ಅನಾರೋಗ್ಯ: ಮುಂಡಗಾರು ಲತಾಗೆ ಥೈರಾಯ್ಡ್, ಮತ್ತೊಬ್ಬರಿಗೆ ಗುಂಡು ಬಿದ್ದು ಕೈ ನೋವು, ಹಲವರಿಗೆ...

ಶರಣಾದ ನಕ್ಸಲರಿಗೆ ಅನಾರೋಗ್ಯ: ಮುಂಡಗಾರು ಲತಾಗೆ ಥೈರಾಯ್ಡ್, ಮತ್ತೊಬ್ಬರಿಗೆ ಗುಂಡು ಬಿದ್ದು ಕೈ ನೋವು, ಹಲವರಿಗೆ BP-ಶುಗರ್!

For Dai;y Updates Join Our whatsapp Group

Spread the love

ಚಿಕ್ಕಮಗಳೂರು:- ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಿ ಜೈಲು ಸೇರಿರುವ ನಕ್ಸಲರಿಗೆ ಅನಾರೋಗ್ಯ ಸಮಸ್ಯೆ ಇರುವುದಾಗಿ ತಿಳಿದು ಬಂದಿದೆ.

ಶರಣಾಗತ ಆರು ಜನ ನಕ್ಸಲರನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ತನಿಖಾಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಆರೂ ಮಂದಿ ನಕ್ಸಲರನ್ನು ಗುರುವಾರ ರಾತ್ರಿಯೇ ನಗರಕ್ಕೆ ಕರೆತರಲಾಗಿತ್ತು. ಅವರನ್ನು ರಾಮನಹಳ್ಳಿ ಡಿಎಆರ್ ಘಟಕದಲ್ಲಿ ಇರಿಸಲಾಗಿತ್ತು. ಎಸ್‌ಪಿ ಡಾ.ವಿಕ್ರಮ್ ಅಮಟೆ ಅವರು ಶುಕ್ರವಾರ ಬೆಂಗಳೂರಿಗೆ ತೆರಳಿದ್ದರಿಂದ ಶನಿವಾರ ಅವರನ್ನು ಎಸ್‌ಪಿ ಅವರ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಯಿತು. ಬಳಿಕ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.

ಆರೋಗ್ಯ ತಪಾಸಣೆ ವೇಳೆ ಸಣ್ಣಪುಟ್ಟ ನೋವುಗಳ ಬಗ್ಗೆ ವೈದ್ಯರ ಬಳಿ ನಕ್ಸಲರು ಹೇಳಿಕೊಂಡಿದ್ದಾರೆ. ಮುಂಡಗಾರು ಲತಾಗೆ ಥೈರಾಯ್ಡ್ ಸಮಸ್ಯೆ ಬಗ್ಗೆ ವೈದ್ಯರ ಬಳಿ ಹೇಳಿಕೊಂಡಿದ್ದಾರೆ. ಇನ್ನೊಬ್ಬರಿಗೆ ಕೈ ಮೇಲೆ ಗನ್ ಶಾಟ್ ಆಗಿರುವುದು ಪತ್ತೆಯಾಗಿದೆ. ಆರು ಮಂದಿಯಲ್ಲಿ ಬಹುತೇಕರಿಗೆ ಬಿಪಿ, ಶುಗರ್ ಇರುವುದು ಕೂಡ ಪತ್ತೆಯಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!