ಬೆಂಗಳೂರು:- ಅನಾರೋಗ್ಯದಿಂದ ಬಳಲುತ್ತಿದ್ದ ಕೋಲಾರದ ಹರಿಕಥೆ ವಿದ್ವಾನ್ ಎನ್.ಆರ್. ಜ್ಞಾನಮೂರ್ತಿ ಅವರು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
Advertisement
ಮೂಲತಃ ಕೋಲಾರ ತಾಲೂಕಿನ ರಾಮಸಂದ್ರದ ನಿವಾಸಿ ಆಗಿರುವ ಎನ್.ಆರ್. ಜ್ಞಾನಮೂರ್ತಿ ಅವರು, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ದುರಾದೃಷ್ಟವಶಾತ್ ಇಂದು ಮುಂಜಾನೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಎನ್.ಆರ್. ಜ್ಞಾನಮೂರ್ತಿ ಅವರ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಅವಿವಾಹಿತರಾಗಿದ್ದ ಅವರು, ತಮ್ಮ ಜೀವನವನ್ನು ಹರಿಕಥೆಗಾಗಿಯೇ ಮೀಸಲಿಟ್ಟಿದ್ದರು. ಅವರಿಗೆ ಕರ್ನಾಟಕ ಕಲಾಶ್ರೀ, ಬಸವಶ್ರೀ, ಕುಮಾರ ವ್ಯಾಸ ಸೇರಿ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು ಎನ್ನಲಾಗಿದೆ.