ಅ. 14ರಂದು ಐಎಂಎ ಪದಾಧಿಕಾರಿಗಳ ಪದಗ್ರಹಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಐಎಂಎ ಗದಗ ಶಾಖೆಯ ಶತಮಾನೋತ್ಸವ ವರ್ಷದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ. ಶ್ರೀಧರ ವಿ. ಕುರಡಗಿ, ಕಾರ್ಯದರ್ಶಿಯಾಗಿ ಡಾ. ರಾಹುಲ್ ಶಿರೋಳ, ಖಜಾಂಚಿಯಾಗಿ ಡಾ. ಜಯರಾಜ ಪಾಟೀಲ ಆಯ್ಕೆಯಾಗಿದ್ದಾರೆ.

Advertisement

ಐಎಂಎ ಗದಗ ಶಾಖೆಯ ಮಹಿಳಾ ಘಟಕದ ಅಧ್ಯಕ್ಷರಾಗಿ ಡಾ. ಸುನೀತಾ ವಿ. ಕುರಡಗಿ, ಕಾರ್ಯದರ್ಶಿಯಾಗಿ ಡಾ. ಸಪನಾ ಜೋಷಿ, ಖಜಾಂಚಿಯಾಗಿ ಡಾ. ಜ್ಯೋತಿ ಪಾಟೀಲ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅ. 14ರಂದು ಸಂಜೆ 7 ಗಂಟೆಗೆ ನಗರದ ಕ್ಲಾರ್ಕ್ಸ್ ಇನ್ ಹೋಟೇಲ್ ಸಭಾಂಗಣದಲ್ಲಿ ಜರುಗಲಿದೆ.

ಮುಖ್ಯ ಅತಿಥಿಗಳಾಗಿ ಡಿಡಿ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದ ಜನಪ್ರಿಯ ನಿರೂಪಕ, ತಜ್ಞ ವೈದ್ಯರಾದ ಡಾ. ನಾ. ಸೋಮೇಶ್ವರ್ ಆಗಮಿಸುವರು. ಐಎಂಎ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಮಧುಸೂಧನ್ ಕಾರಿಗನೂರ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸುವರು. ಗದಗ ಐಎಂಎ ಸದಸ್ಯರು ಸಕಾಲಕ್ಕೆ ಆಗಮಿಸುವಂತೆ ಐಎಂಎ ಪ್ರಕಟಣೆ ಕೋರಿದೆ.


Spread the love

LEAVE A REPLY

Please enter your comment!
Please enter your name here