ಶಿವಮೊಗ್ಗ:- ಶಿವಮೊಗ್ಗ ತಾಲೂಕಿನ ಕುಂಸಿಯ ಕುಂಬೇಶ್ವರ್ ಬೀದಿಯಲ್ಲಿ ತಮ್ಮ ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮಕ್ಕಳಿಬ್ಬರು ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ. 35 ವರ್ಷದ ವಾಸು ಅಲಿಯಾಸ್ ವಸಂತ್ ಕೊಲೆಯಾದ ದುರ್ದೈವಿ.
ಆಕಾಶ್ ಮತ್ತು ಹರೀಶ್ ಸಹೋದರಿಬ್ಬರು ಸೇರಿ ಮಚ್ಚಿನಿಂದ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದಾರೆ. ಇವರ ತಾಯಿ ಜೊತೆ ವಸಂತ್ ಅನೈತಿಕ ಸಂಬಂಧ ಹೊಂದಿದ್ದು, ನಿನ್ನೆ ಕುಡಿದು ಆಕೆಯ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಈ ವಿಚಾರದಿಂದ ಮಕ್ಕಳಾದ ಹರೀಶ್ ಮತ್ತು ಪುತ್ರ ಆಕಾಶ್ ಸೇರಿಕೊಂಡು ವಸಂತ್ ನನ್ನು ಹೊಡೆದು ಕೊಂದಿದ್ದಾರೆ.
ಅನೈತಿಕ ಸಂಬಂಧಕ್ಕೆ ಮುಂದಾಗುವವರಿಗೆ ತಕ್ಕ ಪಾಠ ಆಗಬೇಕೆಂದು ಸಹೋದರರಿಬ್ಬರು ಬೀದಿಯಲ್ಲೇ ವಸಂತನನ್ನು ಗ್ರಾಮಸ್ಥರ ಎದುರೇ ಕೊಚ್ಚಿ ಹಾಕಿದ್ದಾರೆ. ವಸಂತ ಕೊಲೆ ಮಾಡಿದ ಬಳಿಕ ಇಬ್ಬರು ಎಸ್ಕೇಪ್ ಆಗಿದ್ದಾರೆ. ಕುಂಸಿ ಠಾಣೆಯ ಸಿಪಿಐ ದೀಪಕ್ ನೇತೃತ್ವದ ತಂಡವು ಅರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.