ಸ್ಯಾಂಡಲ್‌ವುಡ್ ನಟ, ಹ್ಯಾಟ್ರಿಕ್ ಹೀರೋ ಇತ್ತೀಚೆಗೆ ಅಮೆರಿಕಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಜ.26ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಅದಕ್ಕೂ ಮುನ್ನ ಪತ್ನಿಯೊಂದಿಗೆ ಅಮೆರಿಕಾದ ಸುಂದರ ಸ್ಥಳಗಳಿಗೆ ಶಿವರಾಜ್ ಕುಮಾರ್ ಭೇಟಿ ನೀಡುತ್ತಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದಿದ್ದ ಶಿವರಾಜ್ ಕುಮಾರ್ ಇದೀಗ ಹೊರಗಡೆ ಒಡಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಶಾಪಿಂಗ್ ಮಾಲ್ ಗೆ ತೆರಳಿದ್ದ ನಟ ಇದೀಗ ಅಮೆರಿಕದ ಕಡಲ ಕಿನಾರೆಯಲ್ಲಿ ಪತ್ನಿ ಜೊತೆ ಕಾಲ ಕಳೆದಿದ್ದಾರೆ.
ಸರ್ಜರಿ ಬಳಿಕ ಶಿವಣ್ಣ ಚೇತರಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಅಮೆರಿಕದ ಸುಂದರ ಜಾಗಗಳಿಗೆ ನಟ ಭೇಟಿ ಕೊಡುತ್ತಿದ್ದಾರೆ. ಅಮೆರಿಕದಲ್ಲಿ ಪತ್ನಿ ಗೀತಾ ಜೊತೆ ಸಮುದ್ರ ವೀಕ್ಷಿಸುತ್ತ ಕಾಲ ಕಳೆದಿದ್ದಾರೆ.
ಕಳೆದ ಮೂರು ನಾಲ್ಕು ದಿನಗಳ ಹಿಂದೆ ‘ನನ್ನ ಸಮುದ್ರ ನೀವು’ ಎಂದು ಅಭಿಮಾನಿಗಳಿಗೆ ಫೋಸ್ಟ್ ಹಂಚಿಕೊಂಡಿದ್ದರು. ಶಿವರಣ್ಣ ಆದಷ್ಟು ಬೇಗ ಚೇತರಿಕೆ ಕಾಣಲ್ಲಿ, ಸಿನಿಮಾಗಳಲ್ಲಿ ಆಕ್ಟೀವ್ ಆಗಲಿ ಎಂದು ಅಭಿಮಾನಿಗಳ ಆಶಯ.