ವಿಜಯಸಾಕ್ಷಿ ಸುದ್ದಿ, ಗದಗ: ದಿನ ನಿತ್ಯ ಯೋಗಾಸನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಗದಗ ಬ್ರೈಟ್ ಹಾರಿಝೊನ ಪ್ರೌಢಶಾಲಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಿ.ಡಿ. ಹರ್ತಿ ಹೇಳಿದರು.
Advertisement
ಅವರು ನಗರದ ಬ್ರೈಟ್ ಹಾರಿಝೊನ ಪ್ರೌಢಶಾಲಾ ಮಕ್ಕಳು ಜಿಲ್ಲಾ ಮಟ್ಟದ ಕಲಾತ್ಮಕ ಯೋಗಾಸನದಲ್ಲಿ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಪೃತಿಕ್ಷಾ ಕೆಂಚಣ್ಣವರ, ಐಷಾ ಫಿರಖಾನವರ, ಹಪ್ಸಾ ಯರಗುಡಿ, ಸ್ನೇಹಾ ಪಾಟೀಲ ಅವರನ್ನು ಅಭಿನಂದಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೆ.ಬಿ. ಹರ್ತಿ, ಶಿವರಾಜ ಗದಗ, ಮಂಜಪ್ಪ ದೇಸಾಯಿ, ಪರಪ್ಪ ಕೋರೆ, ವಿಜಯಕುಮಾರ ಗದಗ, ಕುಸುಮಾ ಗುಗ್ಗರಿ ಇದ್ದರು.


