ದಾಸೋಹ ರೂಪದಲ್ಲಿ ತಾಯಿ ಪ್ರೀತಿಯನ್ನು ನಾಡಿಗೆ ಹಂಚುತ್ತಿರುವ ಬಸವರಾಜ ಹೊರಟ್ಟಿ

0
Spread the love

7

Advertisement

ವಿಜಯಸಾಕ್ಷಿ ಸುದ್ದಿ, ಗದಗ: ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ತಮ್ಮ ತಾಯಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಅವ್ವ ಸೇವಾ ಟ್ರಸ್ಟನ್ನು ಸ್ಥಾಪಿಸಿ ಕಳೆದ 14 ವರ್ಷಗಳಿಂದ ದಾಸೋಹ ರೂಪದಲ್ಲಿ ತಾಯಿ ಪ್ರೀತಿಯನ್ನು ನಾಡಿಗೆ ಹಂಚುತ್ತಿದ್ದಾರೆ.

ಕೋಟ್ಯಾಂತರ ಬೆಲೆಬಾಳುವ ತಮ್ಮ 7 ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ನೀಡಿ 25 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸ್ವಗ್ರಾಮ ಯಡಹಳ್ಳಿಯಲ್ಲಿ ದೇಶದಲ್ಲಿಯೇ ಮೊದಲ ಹೈಟೆಕ್ ಶಾಲೆಯನ್ನು ನಿರ್ಮಿಸಿ ಅಕ್ಷರ ದಾಸೋಹದಲ್ಲಿ ತೊಡಗಿದೆ. ನಾಡಿನ 100ಕ್ಕೂ ಅಧಿಕ ದಿವ್ಯಾಂಗರಿಗೆ ಟ್ರೆöÊಸಿಕಲ್ ನೀಡಿ ಆಸರೆ ಕಲ್ಪಿಸಿದೆ. ಪ್ರತಿವರ್ಷ ಸಾಧಕರಿಗೆ ಅವ್ವ ಪ್ರಶಸ್ತಿ ನೀಡಿ ಗೌರವಿಸಿದೆ. ಧಾರವಾಡ ಜಿಲ್ಲೆಯಲ್ಲಿ ೧೦೦೦ಕ್ಕೂ ಅಧಿಕ ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆಗೆ ಅಳಿಲು ಸೇವೆ ಸಲ್ಲಿಸಿದೆ. ಬೆಳಗಾವಿ ವಿಭಾಗದ ೪೮ ಜನ ಪ್ರತಿಭಾವಂತ ಅಂಧ ವಿಕಲಚೇತನ ವಿಧ್ಯಾರ್ಥಿಗಳಿಗೆ ಧನ ಸಹಾಯ ಮಾಡಿದೆ. ೮೦ ಜನ ಹಿರಿಯ ತಾಯಂದಿರಿಗೆ ಗೌರವ ಸನ್ಮಾನ ಮಾಡಿದೆ. ಅನಾರೋಗ್ಯ ಪೀಡಿತ ಕುಟುಂಬದ ಮಕ್ಕಳಿಗೆ ಆಸರೆಯಾಗಿದೆ. ಶಾಲಾ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ತಾಯಿಯ ಮಹತ್ವದ ಕುರಿತು ಬೆಳಗಾವಿ ವಿಭಾಗ ಮಟ್ಟದಲ್ಲಿ ನಿಬಂಧ ಸ್ಪರ್ಧೆ ಏರ್ಪಡಿಸಿ ಭಾಗವಹಿಸಿದ ೨೬ ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಆಯ್ದ ಲೇಖನಗಳನ್ನು ಒಳಗೊಂಡ `ಮಕ್ಕಳ ಮನದಾಳದಲ್ಲಿ ಅವ್ವ’ ಎಂಬ ಅಮೂಲ್ಯ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗಿದೆ.

ಇಂತಹ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ನೊಂದವರಿಗೆ, ಪ್ರತಿಭಾವಂತರಿಗೆ, ಸಾಧಕರಿಗೆ ಅವ್ವ ಸೇವಾ ಟ್ರಸ್ಟ್ ನೆರವಿನ ಹಸ್ತ ಚಾಚಿದೆ. ಯಡೆಯೂರು ಜಗದ್ಗುರು ತೋಂಟದಾರ್ಯಮಠ ಗದಗ ಇಲ್ಲಿಯ ಲಿಂಗಾಯತ ಪ್ರಗತಿಶೀಲ ಸಂಘದಲ್ಲಿ 1.00 ಲಕ್ಷ ರೂಪಾಯಿಗಳ ದತ್ತಿನಿಧ ಸ್ಥಾಪಿಸಿ ಪ್ರತಿವರ್ಷ ಅವ್ವನ ಹೆಸರಿನಲ್ಲಿ ಜನಪರ ಕಾರ್ಯಕ್ರಮವನ್ನು ಸಂಘಟಿಸಲು ಅನುಕೂಲ ಕಲ್ಪಿಸಿದ್ದಾರೆ. ಡಿ.23ರಂದು ನಡೆಯುವ ವಿಶೇಷ ಉಪನ್ಯಾಸ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ.ಮ.ನಿ.ಪ್ರ.ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ಇವರು ವಹಿಸುವರು.

ಮುಖ್ಯ ಅತಿಥಿಗಳಾಗಿ ಅವ್ವ ಸೇವಾ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರಾದ ಶರಣ ಸಭಾಪತಿ ಬಸವರಾಜ ಹೊರಟ್ಟಿ, ಕಾರ್ಯದರ್ಶಿ ಶರಣ ಶಶಿ ಸಾಲಿ, ಟ್ರಸ್ಟ್ನ ಗದಗ ಜಿಲ್ಲಾ ಸಂಚಾಲಕ ಶರಣ ಡಾ.ಬಸವರಾಜ ಧಾರವಾಡ ಭಾಗವಹಿಸಲಿದ್ದಾರೆ. ಅವ್ವನ ಕುರಿತು ಡಿ.ಸಿ. ಪಾವಟೆ ಬಿ.ಇಡಿ ಕಾಲೇಜಿನ ಡಾ. ಗಿರಿಜಾ ಎಸ್.ಹಸಬಿ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದ ದಾಸೋಹ ಸೇವೆಯನ್ನು ಶರಣೆ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ವಹಿಸಲಿದ್ದು, ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಅವ್ವನ ಮಮತೆ ಪ್ರೀತಿಯ ಬೀಜವನ್ನು ಮತ್ತೆ ಹೆಚ್ಚೆಚ್ಚು ಬಿತ್ತಬೇಕಿದೆ ಎಂದು ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ಅವ್ವ ಸೇವಾ ಟ್ರಸ್ಟ್ನ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಶ್ರೀ ತೋಂಟದಾರ್ಯ ಮಠದಲ್ಲಿ ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿದ ದತ್ತಿನಿಧಿ ವತಿಯಿಂದ ಅವ್ವನ ಮಹತ್ವ ಕುರಿತು ಡಿ.23ರ ಸಾಯಂಕಾಲ 7 ಗಂಟೆಗೆ ವಿಶೇಷ ಉಪನ್ಯಾಸ, ವಿವಿಧ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವ್ವ ಸೇವಾ ಸಂಸ್ಥೆಯನ್ನು 2011ರಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಪ್ರಾರಂಭಿಸಿದ ಹೊರಟ್ಟಿಯವರು ಅವ್ವನ ಹೆಸರಿನಲ್ಲಿ ಸಮಾಜ ಸೇವೆಗೆ ಸಮರ್ಪಿಸಿಕೊಂಡ ಈ ಟ್ರಸ್ಟ್ ಅನೇಕರ ಬಾಳಿಗೆ ಬೆಳಕಾಗಿದೆ.

 


Spread the love

LEAVE A REPLY

Please enter your comment!
Please enter your name here