ಬೆಳಕಿನಲ್ಲಿ ಮನುಕುಲದ ಕಲ್ಯಾಣವಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹಾತಲಗೇರಿ ನಾಕಾದ ಕನಕ ವೃತ್ತದಲ್ಲಿ ಕನಕ ಕಾರ್ತಿಕೋತ್ಸವವನ್ನು ಸಮರ್ಪಣಾ ಭಾವದಿಂದ ಆಚರಿಸಲಾಯಿತು. ಗದಗ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪಣ್ಣ ಹೆಬಸೂರ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ದೀಪ ಬೆಳಗಿಸಿ ಮಾತನಾಡಿ, ಮನುಷ್ಯನು ತನ್ನಲ್ಲಿರುವ ಅಜ್ಞಾನದ ಕತ್ತಲನ್ನು ನಿವಾರಿಸಿಕೊಳ್ಳಲು ಮಹಾತ್ಮರ ಬದುಕಿನ ಜೀವನ ಸಂದೇಶದ ಬೆಳಕಿನಲ್ಲಿ ಬದುಕನ್ನು ರೂಪಿಸಿಕೊಳ್ಳವುದೇ ಕಾರ್ತಿಕೋತ್ಸವದ ಆಚರಣೆಯು ಮುಖ್ಯ ಉದ್ದೇಶ. ಭರತಖಂಡದಲ್ಲಿ ವಿಭೂತಿಪುರುಷರು, ಅನುಭಾವಿಗಳು, ಶರಣರು, ಸಂತರು, ದಾಸರು ತಮ್ಮ ಜೀವನದ ನಡೆ-ನುಡಿಗಳಿಂದ ಮನುಕುಲದ ಕಲ್ಯಾಣವನ್ನು ಬಯಸಿದ್ದಾರೆ. ಅವರ ಆದರ್ಶದಲ್ಲಿ ನಮ್ಮ ಬದುಕನ್ನು ಬೆಳಕಿನತ್ತ ಸಾಗಿಸಬೇಕೆಂದು ನುಡಿದರು.

Advertisement

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಡಾ. ಎಸ್.ಎಫ್. ಜಕಬಾಳ, ಸಾಹಿತಿಗಳಾದ ಡಾ. ಎನ್.ಎಂ. ಅಂಬಲಿಯವರ, ಡಾ. ಎಸ್.ಎನ್. ವೆಂಕಟಾಪೂರ, ಅರುಣೋದಯ ವಾಯು ವಿಹಾರ ಸಂಘದ ಪ್ರೊ. ಎಂ.ಸಿ. ವಗ್ಗಿ, ಪ್ರಭಾಕರ ನಾರಾಯಣಪೂರ, ಪ್ರೊ. ಮಾರುತಿ ಮಡ್ಡಿ, ಸೋಮಣ್ಣ ಬೆನಕವಾರಿ, ಎಚ್.ಎನ್. ಚಿಗರಿ, ಹಾಲೇಶ ಶಹಪೂರ, ಉಮೇಶ ಹಡಪದ, ಸುಭಾಷ ಪರಸುನಾಯಕರ, ವಿ.ಬಿ. ಪಿಡಗಣ್ಣವರ, ಶಿಕ್ಷಕರಾದ ಕಂಕರಿ, ಅಶೋಕ ಕೊಡಗಲಿ, ನಾಗಪ್ಪ ತೋಟಗೇರಿ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here