ಬೆಂಗಳೂರು:- ಬೆಸ್ಕಾಂ ಸಿಬ್ಬಂದಿಗಳ ತುರ್ತು ಕಾರ್ಯಚರಣೆ ಹಿನ್ನೆಲೆ ನಾಳೆಯಿಂದ ಎರಡು ದಿನ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕೋರಮಂಗಲ ವಿಭಾಗದ ದೇವರಬೀಸನಹಳ್ಳಿ ಮತ್ತು ಆಡುಗೋಡಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವ ಕಾರಣ, ನಾಳೆಯಿಂದ ಎರಡು ದಿನ ಪವರ್ ಕಟ್ ಇರಲಿದೆ.
ಅದರಂತೆ ನಗರದ ಬೆಳ್ಳಂದೂರು, ಆರ್‌ಎಂಜೆಡ್, ಎಕೊಸ್ಪೇಸ್ ಎಕೊ ವರ್ಲ್ಡ್, ದೇವರಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ, ಸಕ್ರ ಆಸ್ಪತ್ರೆ, ಪಾಸ್‌ಪೋರ್ಟ್ ಆಫೀಸ್, ಶೋಭ ಅಪಾರ್ಟ್‌ಮೆಂಟ್, ಹೊರ ವರ್ತುಲ ರಸ್ತೆ, 5ನೇ ಇಂಡಸ್ಟ್ರಿಯಲ್ ಲೇಔಟ್, ಕೋರಮಂಗಲ, ಮಡಿವಾಳ, ವೆಂಕಟೇಶ್ವರ ಬಡಾವಣೆ, ಚಿಕ್ಕ ಆಡುಗೋಡಿ, ಜೋಗಿ ಕಾಲೊನಿ, ಈಸ್ಟ್ ಲ್ಯಾಂಡ್ ಹೋಲ್ಡಿಂಗ್ ಬಿಲ್ಡಿಂಗ್, ಸೇಂಟ್ ಜಾನ್ ಸ್ಟಾಫ್ ಕ್ವಾಟ್ರಸ್, ಮಾರುತಿನಗರ, ಆಡುಗೋಡಿ 7 ಮತ್ತು 8ನೇ ಬ್ಲಾಕ್,
ಸಿ.ಎ.ಆರ್. ಪೊಲೀಸ್ ಕ್ವಾಟ್ರಸ್, ಆಡುಗೋಡಿ ಮುಖ್ಯ ರಸ್ತೆ, ಸೇಂಟ್ ಜಾನ್ ಆಸ್ಪತ್ರೆ, ಮಡಿವಾಳ, ಮಾರುತಿ ನಗರ, ಡಾಲರ್ಸ್ ಕಾಲೊನಿ, 100 ಅಡಿ ರಿಂಗ್ ರಸ್ತೆ, ಆರ್ಯಾಕ್ ಕಂಪನಿ, ಬಿ.ಜಿ.ರಸ್ತೆ, ಕೆ.ಹೆಚ್.ಬಿ. ಕಾಲೊನಿ, 5ನೇ ಬ್ಲಾಕ್ ಇಂಡಸ್ಟ್ರಿಯಲ್ ಏರಿಯಾ ಕೋರಮಂಗಲ, ಮೈಕೊ 3, 4, 5 ಮತ್ತು 6ನೇ ಬ್ಲಾಕ್ ಕೋರಮಂಗಲ, ಭುವನಪ್ಪ ಕಾವೇರಿ ಬಡಾವಣೆ, ಕೃಷ್ಣಾ ನಗರ ಇಂಡಸ್ಟ್ರಿಯಲ್ ಲೇಔಟ್, ಎಸ್.ಜಿ.ಪಾಳ್ಯ, 2ನೇ ಬ್ಲಾಕ್ ಧವನ್ ಜ್ಯೂಯಲರಿ, ಮಡಿವಾಳ ಸಂತೆ, ಸಿದ್ದಾರ್ಥ ಕಾಲೊನಿ, ಹ್ಯಾಪಿ ಮೈಂಡ್ ಕಂಪನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಕೋರಮಂಗಲ, ಕೆ.ಎಂ.ಎಫ್, ಮದರ್ ಡೇರಿ, ಎಸ್.ಎಫ್.ಎಸ್ 208, ಎಸ್.ಎಫ್.ಎಸ್ 407, ಉನ್ನಿಕೃಷ್ಣನ್ ರಸ್ತೆ, ಬಿ–ಸೆಕ್ಟರ್, ಎನ್.ಇ.ಎಸ್ ರಸ್ತೆ, ಸಿ.ಎಂ ಎನ್‌ಕ್ಲೇವ್, ಮಾತೃ ಲೇಔಟ್, ಸೋಮೇಶ್ವರನಗರ, ಕನಕನಗರ, ನ್ಯಾಯಾಂಗ ಬಡಾವಣೆ, ಯಲಹಂಕ ಓಲ್ಡ್ ಟೌನ್, ಗಾಂಧಿ ನಗರ, ಹಳೆಯ ಪಟ್ಟಣ ಬಿಬಿಎಂಪಿ ರಸ್ತೆ, ಕೋಡಿ ರೋಡ್, ಪುರವಂಕರ ಅಪಾರ್ಟ್ ಮೆಂಟ್ ಆರ್.ಎಂ.ಝೆಡ್ ಮಾಲ್, ಆರ್.ಎಂ.ಝಡ್ ರೆಸಿಡೆನ್ಸಿಯಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.