ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕುರ್ತಕೋಟಿ ಗ್ರಾಮದ ಮನೋಹರ ಇನಾಮತಿ ಪ್ರೌಢಶಾಲೆ ಮೈದಾನದಲ್ಲಿ ನಡೆದ 2025-26ನೇ ಸಾಲಿನ ಹುಲಕೋಟಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಇನಾಮತಿ ಪ್ರೌಢಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ.
ಪುರುಷರ ವಿಭಾಗ: 100 ಮೀಟರ್ ಓಟದಲ್ಲಿ ಸಂಜಯ್ ಗಣಚಾರಿ ದ್ವಿತೀಯ, 800 ಮೀ ಓಟದಲ್ಲಿ ಮುಸ್ತಾಕ್ ಹಣಗಿ ಪ್ರಥಮ, 1500 ಮೀ. ಓಟದಲ್ಲಿ ತರುಣ್ ಜಕ್ಕಲಿ ಪ್ರಥಮ, ಮಾಂತೇಶ ಈರಗಾರ ಮತ್ತು ನಡಿಗೆಯಲ್ಲಿ ಅಭಿಷೇಕ ಹಿರೇತನ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಅಡತಡೆ ಓಟದಲ್ಲಿ ಮಲ್ಲಪ್ಪ ಶಿರಹಟ್ಟಿ ಪ್ರಥಮ, ಸಂಜಯ್ ಗಣಾಚಾರಿ ದ್ವಿತೀಯ, ಸರಪಳಿ ಗುಂಡು ಎಸೆತದಲ್ಲಿ ಆಕಾಶ ಪೂಜಾರ ಪ್ರಥಮ, ಪ್ರಜ್ವಲ್ ಕೋಳಿವಾಡ ತೃತೀಯ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಆಕಾಶ ಪೂಜಾರ ದ್ವಿತೀಯ ಸ್ಥಾನ ಪಡೆದಿದ್ದಾರೆ.
ರೀಲೆ ಓಟದಲ್ಲಿ ಕೃಷ್ಣ ಪೂಜಾರ ಪ್ರಥಮ, ಉದ್ದ ಜಿಗಿತದಲ್ಲಿ ಹಾಗೂ ಟ್ರಿಪಲ್ ಜಂಪ್‌ನಲ್ಲಿ ದ್ವಿತೀಯ, ಜಾವಲಿನ್ ಎಸೆತದಲ್ಲಿ ಪ್ರಜ್ವಲ್ ಕೋಳಿವಾಡ ತೃತೀಯ, ಬಾಲಕರ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ.
ಬಾಲಕಿಯರ ವಿಭಾಗ: 400, 1,500 ಮತ್ತು 3,000 ಮೀ. ಓಟದಲ್ಲಿ ಶಿಲ್ಪಾ ಕಂಬಾರ ಪ್ರಥಮ, 200 ಮೀ ಓಟದಲ್ಲಿ ಬಾನು ಹಂಚಿನಾಳ ತೃತೀಯ, ನಡಿಗೆಯಲ್ಲಿ ಪ್ರಭಾವತಿ ಮ್ಯಾಗೇರಿ ದ್ವಿತೀಯ, ಗುಂಡು ಎಸೆತದಲ್ಲಿ ಸವಿತಾ ಕಬಳ್ಳಿ ದ್ವಿತೀಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ಸರಪಳಿ ಗುಂಡು ಎಸೆತದಲ್ಲಿ ಸಂಜನಾ ಪ್ರಭೇನ್ಮಠ ತೃತೀಯ, ಚಕ್ರ ಎಸೆತದಲ್ಲಿ ಮಾಬೂಬಿ ನಮಾಜಿ ಪ್ರಥಮ, ಸುಕನ್ಯ ಅಣ್ಣಿಗೇರಿ ಉದ್ದ ಜಿಗಿತದಲ್ಲಿ ದ್ವಿತೀಯ, ಎತ್ತರ ಜಿಗಿತದಲ್ಲಿ ತೃತೀಯ, ಟ್ರಪಲ್ ಜಂಪ್‌ನಲ್ಲಿ ಶಾಹಿನ್ ನದಾಫ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಲ್ಲೆ ಎಸೆತದಲ್ಲಿ ತೇಜಸ್ವಿನಿ ಮಹಾಲಿಂಗಪುರ ಪ್ರಥಮ ಹಾಗೂ ಚಕ್ರ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ. ಗುಂಪು ವಿಭಾಗದ ಥ್ರೋಬಾಲ್, ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಸಾಧಕ ಕ್ರೀಡಾಪಟುಗಳಿಗೆ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.