ಸೀರೆ ಹುಟ್ಟು, ಕುಂಕುಮ-ಅರಿಶಿಣ, ಹಾಕೊಂಡು ದಸರಾ ಉದ್ಘಾಟನಾ ಮಾಡಿ: ಮುಷ್ತಾಕ್ ಗೆ ಪ್ರತಾಪ್ ಸಿಂಹ ಸವಾಲ್!

0
Spread the love

ಹುಬ್ಬಳ್ಳಿ:- ಸೀರೆ ಹುಟ್ಟು, ಕುಂಕುಮ-ಅರಿಶಿಣ, ಹಾಕೊಂಡು ದಸರಾ ಉದ್ಘಾಟನಾ ಮಾಡಿ ಎಂದು ಬಾನು ಮುಷ್ತಾಕ್ ಗೆ ಪ್ರತಾಪ್ ಸಿಂಹ ಸವಾಲ್ ಹಾಕಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ರನ್ನು ಆಹ್ವಾನ ನೀಡಲಾಗಿದೆ. ಅವರ ಮೇಲೆ ಗೌರವ ಇದೆ . ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆ ಮುಖಟವಾಗಿರುವ ದಸರಾ ಉದ್ಘಾಟನೆ ಅವರ ಕೈಯಲ್ಲಿ ಅವಶ್ಯಕತೆ ಇತ್ತಾ? ಎಂದು ಪ್ರಶ್ನಿಸಿದರು.

Advertisement

ಸಿದ್ಧರಾಮಯ್ಯ, ಡಿಕೆ‌ ಶಿವಕುಮಾರ್ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಬಾನು ಮುಷ್ತಾಕ್ ನಿಮಗೆ ಆತ್ಮಸಾಕ್ಷಿ ಇಲ್ವ ನೀವು ಹೇಗೆ ಒಪ್ಪಿಕೊಂಡ್ರಿ. ಭುವನೇಶ್ವರಿ ಬಗ್ಗೆ ಮಾತನಾಡುತ್ತಾರೆ ನಾವು ಕಾವೇರಿಯನ್ನು ದೇವತೆ ಅಂತವೆ. ಅದಕ್ಕೆ ಪೂಜೆ ಮಾಡತ್ತಿವಿ ಬಾನು ಮೇಡಂ ಅದರ ನೀರು ಹೇಗೆ ಕುಡಿತ್ತಿರಾ? ನಿಮ್ಮ ಗಂಟಲೊಳಗೆ ನೀರು ಹೋಗತ್ತೆ.

ಬಾನು ಮೇಡಂ ನಿಮ್ಮ ಅಲ್ಲಾನ ಮಸೀದಿ ಒಳಗೆ ನಿಮಗೆ ಬಿಟ್ಟಲ್ಲಾ. ನಮ್ಮ ಅರಿಸಿಣ ಕುಂಕುಮ ಹೊತ್ತ ಚಾಮುಂಡಿ ನಿಮ್ಮನ್ನಾ ಬೆಟ್ಟಕ್ಕೆ ಕರೆಯಿಸಿಕೊಳ್ಳತ್ತಾಳ. ನೀವು ಮಾತೋಡಕೆ ಅರ್ಥ ಇರಬೇಕು ಮೇಡಂ. ನೀವು ಸೀರೆ ಹುಟ್ಟು, ಕುಂಕುಮ, ಅರಿಸಿಣ, ಹೂಯಿಟ್ಟುಕೊಂಡು ಬಂದು ದಸರಾ ಉದ್ಘಾಟನಾ ಮಾಡಿ ಮೇಡಂ. ನಾವು ನೆಲ, ಜಲ, ಪರಿಸರದಲ್ಲಿ ದೇವರನ್ನು ಕಾಣತ್ತಿವಿ ಅದು ನಮ್ಮ ಧರ್ಮ. ಮರಭೂಮಿಯಲ್ಲಿ ಮರಳಿನಲ್ಲಿ ಹುಟ್ಟಿದ‌ ಧರ್ಮ ನಮ್ಮದಲ್ಲಾ. ಬಾನು ಮೇಡಂ ನಮ್ಮ ಧರ್ಮ ಹಬ್ಬದ ಉದ್ಘಾಟನೆಗೆ ನಿಮ್ಮ ಮನಸ್ಸಾದ್ರೂ ಹೇಗೆ ಒಪ್ಪುತ್ತೆ.

ವಿವಿಧತೆಯಲ್ಲಿ ಏಕತೆ ಬರೀ ಹಿಂದೂಗಳಲ್ಲಿ ಮಾತ್ರ. ಆದರೆ ಮುಸ್ಲಿಂ, ಕ್ರಿಶ್ಚಿಯನ್ ರನಲ್ಲಿ ಇದು ಇಲ್ಲಾ. ನಾನು ದೇವರನ್ನು ದೇವಿಯಲ್ಲಿ ಕಾಣುತ್ತೆವೆ. ನಿಮ್ಮ ಧರ್ಮದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳತ್ತಿರಿ. ನನ್ನ ಕರ್ವಟ್ ಮಾಡದೆ, ಸುನ್ನತ್ ಮಾಡಿಕೊಳ್ಳದೆ ಬರೀ ಪ್ರವಾಸಿಗನಾಗಿ ಮೆಕ್ಕಾಕ್ಕೆ ಕಳುಹಿಸಿ ಕೊಡತ್ತಿರಾ?.ಮತ್ತೆ ನೀವು ಹೇಗೆ ನಮ್ಮ ಸಂಸ್ಕೃತ ಪಾಲಿಸದೆ ಉದ್ಘಾಟನೆಗೆ ಬರ್ತಿರಾ ಎಂದು ಪ್ರಶ್ನಿಸಿದರು.


Spread the love

LEAVE A REPLY

Please enter your comment!
Please enter your name here