ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಶಂಕರ ಶಿವಾಚಾರ್ಯ ಕುರುಹಿನಶೆಟ್ಟಿ ಸಮುದಾಯ ಭವನ ಬೆಟಗೇರಿ-ಗದಗದಲ್ಲಿ ನೂತನವಾಗಿ ರಾಣಿ ಚನ್ನಮ್ಮಾಜಿ ಸಾಂಸ್ಕೃತಿಕ ಕಲಾ ಸಂಸ್ಥೆಯ ಉದ್ಘಾಟನಾ ಸಮಾರಂಭವನ್ನು ಬೃಹನ್ಮಠದ ಶ್ರೀ ಮ.ಘ.ಚ. ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಡಿದ ಶ್ರೀಗಳು, ರಾಣಿ ಚನ್ನಮ್ಮಾಜಿ ಸಾಂಸ್ಕೃತಿಕ ಕಲಾ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ. ನೂರಾರು ಕಲಾವಿದರಿಗೆ ನೆಲೆಯಾಗಿ, ದಾರಿ ದೀಪವಾಗಲಿ, ಮುಗಿಲೆತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬೃಹನ್ಮಠದ ಶ್ರೀ ಮ.ಘ.ಚ. ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಯಕ ಫೌಂಡೇಶನ್ ಹಾಗೂ ಸಿಂಚನ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಿವರಾಜಗೌಡ ಮ.ಶಿವನಗೌಡರ, ಅತಿಥಿಗಳಾಗಿ ಉಸಿರು ಫೌಂಡೇಶನ್‌ನ ರೇಣುಕಾ ಶ.ಪಾಟೀಲ ಪಾಲ್ಗೊಂಡಿದ್ದರು.
ಕಲಾ ಸಂಸ್ಥೆಯ ಕಲಾವಿದರಾದ ಜಾವೀದ ಅಸುಂಡಿ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ ಬನಹಟ್ಟಿ ವಂದಿಸಿದರು.