ವಿಜಯಸಾಕ್ಷಿ ಸುದ್ದಿ, ಗದಗ : ಕೃಷಿ ವಸ್ತುಪ್ರದರ್ಶನದಿಂದ ರೈತರ ಜ್ಞಾನ ವಿಸ್ತೃತಗೊಳ್ಳುತ್ತದೆ. ರೈತರಿಗೆ ಉಪಯೋಗಕಾರಿಯಾಗುವ ಇಂತಹ ಪ್ರದರ್ಶನ ಹಮ್ಮಿಕೊಂಡಿರುವುದು ಸೂಕ್ತವಾಗಿದೆ ಎಂದು ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ನರೇಗಲ್ಲದ ಅಬ್ಬಿಗೇರಿ ಗ್ರಾಮದಲ್ಲಿ ಶರನ್ನವರಾತ್ರಿ ಉತ್ಸವದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ರೇಣುಕಾ ಶಿವಾಚಾರ್ಯ ಶ್ರೀಗಳು ಮಾತನಾಡಿ, ಕೃಷಿ ಇಲಾಖೆ ರೈತರಿಗಾಗಿ ಹಲವಾರು ಕೃಷಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದು, ಅದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೃಷಿ ಉಪ ನಿರ್ದೇಶಕ ಪಾಲಾಕ್ಷಗೌಡ ಬಿ.ಆರ್. ಮಾತನಾಡಿ, ರೈತರು ಸಾಂಪ್ರದಾಯಿಕ ಪದ್ಧತಿಗಳ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಎಲ್ಲಾ ಯೋಜನೆಗಳ ಬಗ್ಗೆ ವಿವರವಾದ ವರದಿಯನ್ನು ಸಹಾಯಕ ಕೃಷಿ ನಿರ್ದೇಶಕರಾದ ರವೀಂದ್ರಗೌಡ ಮಾಲಿಪಾಟೀಲ ನೀಡಿದರು. ಸಾವಿತ್ರಿ ಸಂಕನಗೌಡ್ರ, ಶಿವಪುತ್ರ ದೊಡ್ಡಮನಿ ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ಸಿರಿಧಾನ್ಯ ಮಹತ್ವ ಸಾರುವ ರಂಗೋಲಿ ಜನರ ಮನಸ್ಸು ಸೆಳೆಯಿತು.