ಶಿವಯೋಗಿಯ ನೆನೆದರೆ ಮುಕ್ತಿ : ಶರಣಬಸವ ದೇವರು

0
Inauguration of Bhakti Pradana Drama
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದಲ್ಲಿ ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಿಂದ ಧಾರವಾಡದ ಡಾ. ರಾಜಶೇಖರ ಎಸ್.ಬಸೆಟ್ಟಿ ವಿರಚಿತ `ವೈರಾಗ್ಯನಿಧಿ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಮಹಾತ್ಮೆ’ ಎಂಬ ಭಕ್ತಿ ಪ್ರದಾನ ನಾಟಕದ ಪ್ರಾರಂಭೋತ್ಸವ ಮಂಗಳವಾರ ನಡೆಯಿತು.

Advertisement

ನಾಟಕ ಉದ್ಘಾಟಿಸಿದ ಬಸವ ಬೆಳವಿಯ ಶರಣಬಸವ ದೇವರು ಮಾತನಾಡಿ, ಮಹಾತ್ಮರೆಂದರೆ ದೊಡ್ಡವರು. ಅವರು ತಮ್ಮ ಪವಾಡಗಳಿಂದಲೇ ದೊಡ್ಡವರಾದವರು. ಈ ಭಾಗದಲ್ಲಿ ಬಾಳಿ ಬದುಕಿದ ಮಹಾಂತ ಶಿವಯೋಗಿ ತನ್ನ ಪವಾಡಗಳಿಂದಲೇ ಶಿಶಿನಾಳ ಶರೀಫ, ನವಲಗುಂದ ನಾಗಲಿಂಗರು ಇಲ್ಲಿ ಹಾದು ಹೋಗುವ ಸಂದರ್ಭದಲ್ಲಿ ಹೆದರುತ್ತಿದ್ದರು. ಇತಿಹಾಸದಲ್ಲಿ ಇಂತಹ ಕವಿಗಳು ಇನ್ನೊಬ್ಬರಿಲ್ಲ. ಶಿವಯೋಗಿ ನೆನೆದರೆ ಮುಕ್ತಿ ಸಿಗುತ್ತದೆ. ಇಂತವರ ನಾಟಕ ನೋಡುವದು ನಮ್ಮ ಭಾಗ್ಯ ಎಂದರು.

ನಾಟಕದ ಕರ್ತೃ ಡಾ. ರಾಜಶೇಖರ ಎಸ್.ಬಸೆಟ್ಟಿ ಮಾತನಾಡಿ, ಈ ನಾಟಕವನ್ನು ರಂಗಭೂಮಿಗೆ ತಂದದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸಂಗತಿಯಾಗಿದೆ. ಈ ನಾಟಕವನ್ನು ಈ ಕಂಪನಿಗಾಗಿಯೇ ಬರೆದಿದ್ದೇನೆ. ಕಲೆ, ರಂಗಭೂಮಿ ಉಳಿಯಬೇಕಿದೆ. ಈ ಕೆಟ್ಟು ಹೋದ ಸಂಪ್ರದಾಯಗಳಿಂದ ಕಲೆ ಉಳಿಯಬೇಕು, ಬೆಳೆಯಬೇಕು ಎಂದರು.

ಈ ಸಂದರ್ಭದಲ್ಲಿ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು, ಪಟ್ಟಣದ ಗಣ್ಯರಾದ ಎಂ.ಡಿ. ಬಟ್ಟೂರ, ಬಿ.ಕೆ. ಹರಪನಹಳ್ಳಿ, ಆರ್.ಸಿ. ಕಮಾಜಿ, ಎಸ್.ಎಂ. ನೀಲಗುಂದ, ಪಿ.ಎ. ವಂಟಕರ, ಡಾ. ಎಸ್.ಸಿ. ಚವಡಿ, ಅಶೋಕ ಸೊನಗೋಜಿ, ಬಸವರಾಜ ಸುಂಕಾಪೂರ, ಬಸವರಾಜ ಬಾತಾಖಾನಿ, ಪಿ.ಎಸ್. ಮರಿದೇವರಮಠ ಇದ್ದರು. ಎಸ್.ಎಂ. ಉಜ್ಜಣ್ಣವರ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here