HomeGadag Newsಕೇಂದ್ರದ ಸದುಪಯೋಗಕ್ಕೆ ಆದ್ಯತೆ ನೀಡಿ

ಕೇಂದ್ರದ ಸದುಪಯೋಗಕ್ಕೆ ಆದ್ಯತೆ ನೀಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಲಾಖೆಯ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದೊಂದಿಗೆ ಶೈಕ್ಷಣಿಕ ಮಟ್ಟ ಸುಧಾರಣೆ, ಸಾಧನೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ್ ಮತ್ತು ಹಾನಗಲ್ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಅಭಿಪ್ರಾಯಪಟ್ಟರು.

ಅವರು ಶನಿವಾರ ಪಟ್ಟಣದ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ನವೀಕೃತಗೊಂಡ ದಕ್ಷಿಣ ಸಿಆರ್‌ಸಿ ಕೇಂದ್ರದ ಮಕ್ಕಳ ಸ್ನೇಹಿ ಗ್ರಂಥಾಲಯ ಉದ್ಘಾಟಸಿ ಮಾತನಾಡಿದರು.

ಸಮೂಹ ಸಂಪನ್ಮೂಲ ಶಿಕ್ಷಕರು ಇಲಾಖೆ, ಶಿಕ್ಷಕರು, ಪಾಲಕರು, ಮಕ್ಕಳು, ಸಮುದಾಯದ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಲಕ್ಷ್ಮೇಶ್ವರ ಕ್ಲಸ್ಟರ್ ಸಂಪನ್ಮೂಲ ಕೇಂದ್ರವನ್ನು ಇಲ್ಲಿನ ಸಂಪನ್ಮೂಲ ವ್ಯಕ್ತಿ ಸತೀಶ ಬೋಮಲೆ ಅವರು ಕ್ಲಸ್ಟರಿನ ಎಲ್ಲಾ ಶಿಕ್ಷಕರ ಸಹಕಾರದಿಂದ ಹಾಗೂ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ನೆರವಿನಿಂದ ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರ ಸಹಕಾರದಿಂದ ಸಿದ್ಧವಾಗಿರುವ ಈ ಕೇಂದ್ರದ ಸದುಪಯೋಗಕ್ಕೆ ಶಿಕ್ಷಕರು ಆದ್ಯತೆ ನೀಡಬೇಕು ಎಂದರು.

ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೇರ್ ಮಾತನಾಡಿ, ಶಿಕ್ಷಣ ಇಲಾಖೆಯ ಪ್ರತಿ ಕ್ಲಸ್ಟರ್‌ಗೆ ಒಂದು ಸಮೂಹ ಸಂಪನ್ಮೂಲ ಕೇಂದ್ರ ಸ್ಥಾಪಿಸಲಾಗಿದೆ ಹಾಗೂ ಇವು ಶಿಕ್ಷಕರ ತರಗತಿ ಪ್ರಕ್ರಿಯೆಯ ಸವಾಲುಗಳನ್ನು, ತರಗತಿ ಪ್ರಕ್ರಿಯೆಯ ನಾವೀನ್ಯತೆ ಕಲಿಯುವ ಸ್ಥಳವಾಗಿದೆ ಎಂದರು.

ಸಭೆಯಲ್ಲಿ ಪುರಸಭೆ ಸದಸ್ಯ ರಾಜಣ್ಣ ಕುಂಬಿ, ಈಶ್ವರ ಮೆಡ್ಲೇರಿ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಬಸಾಪೂರ, ಶಿಕ್ಷಕರಾದ ಬಿ.ಎಸ್. ಹರ್ಲಾಪುರ, ಚಂದ್ರು ನೇಕಾರ, ಗೀತಾ ಹಳ್ಯಾಳ, ಎಂ.ಎ ನದಾಫ್, ಎಸ್.ಕೆ. ಹವಾಲ್ದಾರ, ಪೂರ್ಣಾಜೆ ಕರಾಟೆ, ಎ.ಎಂ. ಮಠದ, ಎನ್.ಆರ್. ಸಾತಪುತೆ, ಎನ್.ಎಚ್. ಗುಂಜಳ, ನಿಖಿತಾ ಶೇರಖಾನೆ, ಆರ್.ಎಂ. ಶಿರಹಟ್ಟಿ, ಎಸ್.ವಿ. ಅಂಗಡಿ, ಹರೀಶ್ ಎಸ್, ಉಮೇಶ ಹುಚ್ಚಯ್ಯಮಠ, ಎಂ.ಎಂ. ಹವಳದ, ಬಸವರಾಜ ಯರಗುಪ್ಪಿ, ಆರ್. ಮಹಾಂತೇಶ, ಉಮೇಶ ನೇಕಾರ, ಎನ್.ಎ. ಮುಲ್ಲಾ, ಎಮ್.ಎಸ್. ಹಿರೇಮಠ, ತಾಲೂಕಿನ ಎಲ್ಲಾ ಇಸಿಓ, ಬಿಆರ್‌ಪಿ, ಸಿಆರ್‌ಪಿ ಮತ್ತು ಎಲ್ಲಾ ಶೈಕ್ಷಣಿಕ ಸಂಘಗಳ ಪದಾಧಿಕಾರಿಗಳು, ಲಕ್ಷ್ಮೇಶ್ವರ ಉತ್ತರ, ದಕ್ಷಿಣ ಕ್ಲಸ್ಟರನ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ, ಎಚ್.ಡಿ. ನಿಂಗರೆಡ್ಡಿ, ಸ್ವಪ್ನಾ ಕಾಳೆ, ಲಕ್ಷ್ಮಿ ಹತ್ತಿಕಟ್ಟಿ, ಅಕ್ಷತಾ ಕಾಟೆಗಾರ, ಆರ್.ಕೆ. ಉಪನಾಳ ನಿರೂಪಿಸಿದರು. ಉಮೇಶ ನೇಕಾರ ವಂದಿಸಿದರು.

ಸಂಪನ್ಮೂಲ ವ್ಯಕ್ತಿ ಸತೀಶ ಬೋಮಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿ ಶಿಕ್ಷಕರ ಆನ್‌ಲೈನ್ ಸೇವೆಗಳ ಮಾಹಿತಿ, ಕ್ಲಸ್ಟರ್ ನಕ್ಷೆ, ಕ್ಲಸ್ಟರ್‌ನ ಎಲ್ಲಾ ಶಾಲೆಗಳ ಸಂಪೂರ್ಣವಾದ ಮಾಹಿತಿಯಿದ್ದು, ಕೇಂದ್ರ ಸಿದ್ಧವಾಗಲು ಎಲ್ಲ ಶಾಲೆಗಳ ಶಿಕ್ಷಕರ, ಹಿರಿಯರ ಸಹಕಾರ ಅಪಾರವಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!