ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಸ್ವಾತಂತ್ರ್ಯ ದಿನಾಚರಣೆ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕುಷ್ಟಗಿ ರಸ್ತೆಯಲ್ಲಿನ ಮುತ್ತಣ್ಣ ಮೆಣಸಿನಕಾಯಿ ಅವರ ಬಯಲು ಜಾಗೆಯಲ್ಲಿ ಇಲ್ಲಿನ ಡಾ.ಅಬ್ದುಲ್ ಕಲಾಂ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಸಮಾರಂಭ ನಡೆಯಿತು.
ಡಾ.ಅಬ್ದುಲ್ ಕಲಾಂ ಟ್ರಸ್ಟ್ನ ಅಧ್ಯಕ್ಷ ರಪೀಕ್ ತೋರಗಲ್ ಮಾತನಾಡಿ, ದೈಹಿಕ ಚಟುವಟಿಕೆಯ ಮುಂದುವರಿದ ಭಾಗವೇ ಕ್ರೀಡೆ. ಪ್ರತಿಯೊಬ್ಬರೂ ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಮಹತ್ವವನ್ನು ಅರಿತುಕೊಳ್ಳಬೇಕಾಗಿದೆ. ಯುವ ಸಮೂಹವು ಕ್ರೀಡಾ ಮನೋಭಾವ ಬೆಳೆಸಿಕೊಂಡು ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಎಂದರು.
ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್ ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ಚೇರಮನ್ ಹಸನ ತಟಗಾರ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ, ಎಲ್ಲ ಕ್ರೀಡಾಭಿಮಾನಿಗಳನ್ನು ಹಿಡಿದಿಟ್ಟಿಕೊಳ್ಳುವ ಶಕ್ತಿ ಕ್ರಿಕೆಟ್ ಪಂದ್ಯಾವಳಿಗಿದೆ. ಹೀಗಾಗಿ ಲೀಗ್‌ನಲ್ಲಿ ಸ್ಪರ್ಧಿಸಿರುವ ಎಲ್ಲಾ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಬೇಕು ಎಂದರು.
ಮುಖಂಡರಾದ ಎ.ಡಿ. ಕೋಲಕಾರ, ರಾಜೇಸಾಬ ಸಾಂಗ್ಲೀಕರ ಹಾಗೂ ಎಂ.ಬಿ. ಕಂದಗಲ್ ಮಾತನಾಡಿದರು. ಇದಕ್ಕೂ ಮುನ್ನ ಮುಖಂಡರಾದರ ಎಚ್.ಆರ್. ಬಾಗವಾನ ಹಾಗೂ ಅಬ್ದುಲ್‌ಸಾಬ ಕಾತರಕಿ, ಉದ್ಯಮಿ ಮಹ್ಮದ ಕೋಚಲಾಪೂರ ಪಂದ್ಯಾವಳಿಗೆ ಚಾಲನೆ ನೀಡಿದರು. ಪಟ್ಟಣದಲ್ಲಿ ಅಬ್ದುಲ್ ಕಲಾಂ ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, 15 ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ.
ಮುಖಂಡರಾದ ಮುತ್ತಣ್ಣ ಮೆಣಸಿನಕಾಯಿ, ಸುಭಾನಸಾಬ ಆರಗಿದ್ದಿ, ಎಂ.ಎಚ್. ಕೋಲಕಾರ, ಫಯಾಜ ತೋಟದ, ಭಾಷೇಸಾಬ ಕರ್ನಾಚಿ, ದಾವಲ ತಾಳಿಕೋಟಿ, ನಾಸಿರಅಲಿ ಸುರಪುರ, ರಫೀಕ್ ಬಾಗಲಕೋಟೆ, ಇಮ್ರಾನ ಅತ್ತಾರ, ಸದ್ದಾಮ ಮನಿಯಾರ, ಶಾಮೀದ ಮಾಲ್ದಾರ್, ಗುಲಾಂ ಹುನಗುಂದ, ಸುಭಾನ ಸಂತು, ಹೈದರ ಹುನಗುಂದ, ಸಮೀರ್ ಅತ್ತಾರ, ಇಜಾಜ್ ನದಿಮುಲ್ಲಾ, ರಿಯಾಜ್ ಯಲಿಗಾರ, ಸಮೀರ್ ಅತ್ತಾರ, ಭಾಷೇಸಾಬ ಮುದಗಲ್, ಮೈಬು ಚಾಮಲಾಪುರ ಮುಂತಾದವರಿದ್ದರು.