ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಸುದರ್ಶನ ಚಕ್ರ ಯುವ ಮಂಡಳದಿಂದ ಗದಗ ಕಾಟನ್ ಮಾರ್ಕೆಟ್ ರಸ್ತೆಯಲ್ಲಿ ಹಿಂದೂ ಮಹಾಗಣಪತಿ ಉತ್ಸವವವನ್ನು ಶೃದ್ಧಾ-ಭಕ್ತಿಯೊಂದಿಗೆ ಆಚರಿಸಲಾಗುವದು ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಹಬೀಬ ಹೇಳಿದರು.
ಹಿಂದೂ ಮಹಾಗಣಪತಿ ಜಿಲ್ಲಾ ಕಾರ್ಯಾಲಯದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಗದುಗಿನ ಕಾಟನ್ ಮಾರ್ಕೆಟ್‌ನಲ್ಲಿ ಹಿಂದೂ ಮಹಾಗಣಪತಿ ಉತ್ಸವವನ್ನು ಬಹು ವೈಭವದೊಂದಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಿಕೊಂಡು ಬರಲಾಗಿದ್ದು, ಈ ವರ್ಷವೂ ಸಹ ಅದ್ದೂರಿಯಾಗಿ ಆಚರಿಸಲಾಗುವದು ಎಂದರು.
ಈ ವರ್ಷದ ಉತ್ಸವ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವ ಅಧ್ಯಕ್ಷರಾಗಿ ಎಸ್.ಎಚ್. ಶಿವನಗೌಡರ, ಅಧ್ಯಕ್ಷರಾಗಿ ಸುಧೀರ ಕಾಟೀಗರ, ಉಪಾಧ್ಯಕ್ಷರಾಗಿ ರವಿರಾಜ ಮಾಳೇಕೊಪ್ಪಮಠ, ಗಂಗಾಧರ ಹಬೀಬ, ಅಶ್ವಿನಿ ಜಗತಾಪ, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಹಬೀಬ, ಕಾರ್ಯದರ್ಶಿಯಾಗಿ ಅಂಕಿತ ಸವಕಾರ, ಶಿವು ಹಿರೇಮನಿಪಾಟೀಲ, ಕುಮಾರ ಮಾರನಬಸರಿ, ಖಜಾಂಚಿಯಾಗಿ ಕೀರ್ತಿ ಕಾಂಬಳೇಕರ, ಪ್ರಶಾಂತ ಪಾಟೀಲ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಚ್. ಶಿವನಗೌಡರ ಮಾತನಾಡಿ, ಈ ಸಲ ಹಿಂದೂ ಮಹಾಗಣಪತಿ ಉತ್ಸವವನ್ನು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಿತ್ಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗುವದು ಎಂದರು.
ವೇದಿಕೆಯ ಮೇಲೆ ಮೋಹನ ಮಾಳಶೆಟ್ಟರ ಹಾಗೂ ಅಶ್ವಿನಿ ಜಗತಾಪ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಂಜು ಖೋಡೆ, ಯಲ್ಲಪ್ಪ ಭಜಂತ್ರಿ, ರಮೇಶ ಸಜ್ಜಗಾರ, ರವಿ ಚವ್ಹಾಣ, ಗಜು ಹಬೀಬ, ಗಣೇಶ ಲದವಾ, ಸ್ವರೂಪ ಹುಬ್ಬಳ್ಳಿ, ಸುರೇಶ ಚವ್ಹಾಣ, ಪ್ರಶಾಂತ ಚವಡಿ, ನಾಗರಾಜ ಸೋಳಂಕಿ, ವಿಶ್ವನಾಥ ಶಿರಗಣ್ಣವರ, ರವಿ ನರೇಗಲ್ಲ, ಪ್ರಸಾದ ಸಿದ್ಲಿಂಗ್, ಅನೀಲ ಪವಾರ, ಗಿರೀಶ ಬೇವಿನಕಟ್ಟಿ, ಗಣೇಶ ಚವ್ಹಾಣ, ಮಾರುತಿ ಕಾಟವಾ, ಪ್ರವೀಣ ನಾಯ್ಕರ್, ಈರಣ್ಣ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.