ಜನಪದ ಸಾಹಿತ್ಯ ಚಿರಸ್ಥಾಯಿಯಾಗಿದೆ : ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ

0
Inauguration of Janapada Utsav program
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾಗಿರುವ ಜನಪದ ಕಲೆಯು ತನ್ನದೇ ಆದ ವೈಶಿಷ್ಟ್ಯತೆ ಮತ್ತು ಪರಂಪರೆಯನ್ನು ಹೊಂದಿದ್ದು, ಸೂರ್ಯ-ಚಂದ್ರರು ಇರುವವರೆಗೂ ಜನಪದ ಸಾಹಿತ್ಯ ಭೂಮಿಯ ಮೇಲೆ ಚಿರಸ್ಥಾಯಿಯಾಗಿರಲಿದೆ. ಇಂತಹ ಅದ್ಭುತ ಶಕ್ತಿಯನ್ನು ಹೊಂದಿದ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

Advertisement

ಅವರು ಶಿರಹಟ್ಟಿ ತಾಲೂಕಿನ ಕೊಂಚಿಗೇರಿ ಗ್ರಾಮದಲ್ಲಿ ಜರುಗಿದ ಹಜರತ್ ಮೆಹಬೂಬ ಸುಬಾನಿ ಅವರ ಉರುಸ್ ನಿಮಿತ್ತ ಶ್ರೀ ಕುಮಾರೇಶ್ವರ ಜನಪದ ಸಾಂಸ್ಕೃತಿಕ ಕಲಾ ತಂಡದ ಸಹಯೋಗದಲ್ಲಿ ಜರುಗಿದ ಜನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ 5 ವಿದ್ಯಾರ್ಥಿಗಳಿಗೆ, ವಿಶೇಷ ದಾನಿಗಳಿಗೆ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಪರಯ್ಯ ವಿಭೂತಿಮಠ, ಮುತ್ತಯ್ಯನವರ ಹಿರೇಮಠ, ಹಜರತ್ ಮೌಲಾನ ಮಹಮ್ಮದ ಇಕ್ಬಾಲ ವಹಿಸಿದ್ದರು. ಅಧ್ಯಕ್ಷತೆಯನ್ನು ಈರಣ್ಣ ಹುಡೇದ ವಹಿಸಿದ್ದರು. ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಡಿ.ಕೆ. ಹೊನ್ನಪ್ಪನವರ, ಪರಮಪ್ಪ ಬೂದಿಹಾಳ, ಹೊನ್ನಪ್ಪ ಊದಣ್ಣವರ, ಸುರೇಶ ಕೊಡಬಾಳ, ಇಬ್ರಾಹಿಂಸಾಬ ನದಾಫ್, ಮಾಬುಸಾಬ ಗಾಡಗೋಳಿ, ಸುಭಾನಸಾಬ ಹಾವನೂರ, ದುರಗಮ್ಮ ಉಂದಲಮನಿ, ರಾಜೇಸಾಬ ನದಾಫ್, ಇಬ್ರಾಹಿಂಸಾಬ ಮತ್ತೂರ, ಕೆಂಚಪ್ಪ ಕೊಡಬಾಳ, ಅಶೋಕ ಬಡಿಗೇರ, ಮೌನೇಶ ಉದಣ್ಣವರ, ರಾಜಣ್ಣ ಹತ್ತಿಕಾಳ, ಈರಣ್ಣ ಕಬ್ಬಿಣದ, ಮೌಲಾಸಾಬ ಮತ್ತೂರ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here