ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿ ನಗರದ ವಾರ್ಡ್ ನಂ. 3, ಬಣ್ಣದ ನಗರದ ಸರಕಾರಿ ಶಾಲೆಯ ನಂ. 11ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಹೋರಾಟಗಳನ್ನು, ಕರವೇ ತತ್ವ-ಸಿದ್ಧಾಂತಗಳನ್ನ ಮೆಚ್ಚಿ, ವಾರ್ಡ್ ಘಟಕವನ್ನು ಉದ್ಘಾಟಿಸಿ, ನೂತನ ಕಾರ್ಯಕರ್ತರ ಸೇರ್ಪಡೆ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಗದಗ ಜಿಲ್ಲಾಧ್ಯಕ್ಷ ಹನುಮಂತಪ್ಪ ಹೆಚ್.ಅಬ್ಬಿಗೇರಿ ವಹಿಸಿ ಮಾತನಾಡಿ, ತಮ್ಮ ವಾರ್ಡಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ಸಂಘಟನಾತ್ಮಕ ಹೋರಾಟ, ಸಮಾಜಮುಖಿ ಕೆಲಸಗಳನ್ನು ಮಾಡೋಣ ಎಂದು ತಿಳಿಸಿದರು.
ಸಭೆಯ ನೇತೃತ್ವವನ್ನು ಜಿಲ್ಲಾ ಉಪಾಧ್ಯಕ್ಷ ವಿನಾಯಕ ಬದಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಲಕ್ಷ್ಮಣ ಕುಂಬಾರರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಈಳಿಗೆರ್, ಮಹಿಳಾ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀ ಹಿತ್ತಲಮನಿ, ಕುಮಾರ್ ರೇವಣ್ಣವರ್, ತೌಶಿಫ್ ಡಾಲಾಯತ್, ಶಿವು ಮಠದ, ದಾವಲಸಾಬ ತಹಸೀಲ್ದಾರ, ರಫೀಕ್ ನದಾಫ್, ಇಸಾಕ್ ನದಾಫ್, ಸಿರಾಜ್ ಹೊಸಮನಿ ಸೇರಿದಂತೆ ವಾರ್ಡಿನ ಗುರು-ಹಿರಿಯರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.



