ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕೃಷಿ, ಶಿಕ್ಷಣ, ವ್ಯಾಪಾರ ಎಲ್ಲ ಕ್ಷೇತ್ರಗಳಲ್ಲಿ ತೀವೃಗತಿಯಲ್ಲಿ ಬೆಳೆಯುತ್ತಿರುವ ಲಕ್ಷ್ಮೇಶ್ವರದಲ್ಲಿ ಜನಸಾಮಾನ್ಯರ ವ್ಯಾಪಾರ, ಉದ್ಯೋಗ ಮತ್ತು ಸ್ವಾವಲಂಬಿ ಬದುಕಿಗೆ ಆಸರೆಯಾಗಲು ಸಹಕಾರಿ ಸಂಘದ ಅಗತ್ಯತೆ ಸಾಕಷ್ಟಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.
ಅವರು ಭಾನುವಾರ ಪಟ್ಟಣದ ಡಾ. ಮಲ್ಲಾಡದ ಹಾಸ್ಪಿಟಲ್ ಎದುರಿಗಿನ ತಟ್ಟಿ ಕಾಂಪ್ಲೆಕ್ಸ್ನಲ್ಲಿ ನೂತನ ಲಕ್ಷ್ಮೀಪುರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಷ್ಟçದ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಕೊಡುಗೆ ಅಪಾರವಾಗಿದೆ. ಸಂಘ ಬ್ಯಾಂಕಿನ ರೀತಿಯ ಕಾರ್ಯದ ನಡುವೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಳ್ಳಬೇಕು. ಸಹಕಾರಿ ಸಂಘದ ಸೇವೆಯಲ್ಲಿ ಜನರ ನಂಬಿಕೆ, ವಿಶ್ವಾಸ ಗಳಿಸುವುದು ಮುಖ್ಯವಾಗಿದೆ. ಸಂಘದ ಸದಸ್ಯರು, ಸಿಬ್ಬಂದಿಗಳು ಸಹಕಾರಿ ತತ್ವಗಳನ್ನರಿತು ಎಲ್ಲರ ಸ್ನೇಹ, ಪ್ರೀತಿ, ವಿಶ್ವಾಸ ಗಳಿಸಿಕೊಳ್ಳಬೇಕು. ಗಳಿಕೆಯನ್ನೇ ಮುಖ್ಯವಾಗಿಸದೇ ಸಂಘದ ಕಾರ್ಯಕ್ಷೇತ್ರದ ವ್ಯಾಪ್ತಿ ಹೆಚ್ಚಿಸುವಲ್ಲಿ ಎಲ್ಲರೂ ಶ್ರಮಿಸಬೇಕು. ಲಕ್ಷ್ಮೀಪುರ ಸಹಕಾರಿ ಸಂಘ ಆದಷ್ಟು ಬೇಗ ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.
ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಎಂ.ಎಸ್. ದೊಡ್ಡಗೌಡರ, ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ನಾಗರಾಜ ದೇಶಪಾಂಡೆ, ವೀರಣ್ಣ ಮಳಗಿ, ಸಂಘದ ಅಧ್ಯಕ್ಷ ಪ್ರಕಾಶ ವಾಲಿ, ಉಪಾಧ್ಯಕ್ಷ ವಿರೇಶ ಮಾನ್ವಿ, ನಿರ್ದೇಶಕರಾದ ಗಂಗಾಧರ ಮೆಣಸಿನಕಾಯಿ, ಶಕುಂತಲಾ ಬಿ.ಕೊಟಗಿ, ಆನಂದ ತಟ್ಟಿ, ಆನಂದ ತಟ್ಟಿ, ಮಾಂತೇಶ ತಟ್ಟಿ, ರಂಜಿತಾ ಮಹಾಂತಶೆಟ್ಟರ, ಕಾವ್ಯಾ ಕೊಟಗಿ, ಶಿವಪ್ಪ ನಾಯ್ಕರ, ಗುಡ್ಡಪ್ಪ ಹಡಪದ, ಶರಣಬಸಪ್ಪ ಉಮಚಗಿ, ವ್ಯವಸ್ಥಾಪಕ ವಿಜಯಮಾಂತೇಶ ರೋಣದ ಮುಂತಾದವರಿದ್ದರು.