`ಪೋಷಣ್ ಪಕ್ವಾಡ’ ಕಾರ್ಯಕ್ರಮ ಉದ್ಘಾಟನೆ

0
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗ ಹಾಗೂ ಶಿಶು ಅಭಿವೃದ್ಧಿ ಯೋಜನೆ ನರಗುಂದ ಇವರ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ `ಪೋಷಣ್ ಪಕ್ವಾಡ’ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಶಿರೋಳ ಗ್ರಾಮದಲ್ಲಿ ಜರಗಿತು.

Advertisement

ಶಿರೋಳ ಗ್ರಾ.ಪಂ ಸದಸ್ಯರಾದ ಕೌಸರಬಾನು ಮುಲ್ಲಾ ಉದ್ಘಾಟಿಸಿದರು. ಕಾರ್ಯಕ್ರಮದ ಕುರಿತು ಪೋಷಣ್ ಅಭಿಯಾನ ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ ಗುಗ್ಗರಿ ಮಾತನಾಡಿ, ಪೋಷಣ್ ಪಕ್ವಾಡವು 15 ದಿನಗಳ ಕಾಲ ಜರುಗುವ ಕಾರ್ಯಕ್ರಮವಾಗಿದ್ದು, ಈ ವರ್ಷ ವಿಶೇಷವಾಗಿ ಮೊದಲ 1000 ದಿನಗಳ ಆರೈಕೆ, ಮಕ್ಕಳಲ್ಲಿ ಆರೋಗ್ಯಕರ ಜೀವನ ಶೈಲಿ ಹಾಗೂ ಪೋಷಣ್ ಟ್ರ್ಯಾಕ್ಟರ್ ಆ್ಯಪ್‌ನಲ್ಲಿ ಫಲಾನುಭವಿಗಳ ಸ್ವಯಂ ನೋಂದಣಿ ಬಗ್ಗೆ ಮಹತ್ವ ನೀಡಲಾಗುವುದು ಎಂದರು.

ಮೇಲ್ವಿಚಾರಕಿ ಪರಿಮಳ ಹೂಗಾರ ಮಾತನಾಡಿ, ಅಂಗನವಾಡಿಗಳ ಮೂಲಕ ಸುಸ್ಥಿರ ಆಹಾರ ವ್ಯವಸ್ಥೆ, ರಕ್ತಹೀನತೆ ಮತ್ತು ಆರೋಗ್ಯಕರ ಜೀವನಶೈಲಿ ಬಗ್ಗೆ ಅರಿವು ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ವಾಯ್.ಬಿ. ಸಂಕನಗೌಡ್ರ ಮಾತನಾಡಿ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಪೌಷ್ಟಿಕಾಂಶವೇ ಬುನಾದಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಜೆ. ಬಾಗಲಕೋಟ, ಎಸ್.ವಿ. ಜಿಗಳೂರ, ಎಸ್.ವಿ. ಪಾಟೀಲ, ಎಸ್.ಜಿ. ಕುಪ್ಪಸ್ತ, ವಿ.ಎಸ್. ಹಂಚಿನಮನಿ, ಎಮ್.ವಾಯ್. ಬನ್ನಿಗಿಡದ, ಎಸ್.ವಿ. ಕುಪ್ಪಸ್ತ, ಎನ್.ಎಮ್. ಕಣಕೇರಿ, ಎಸ್.ಎಮ್. ಕಿತ್ತಲಿ, ಮಂಟೂರವ್ಮಠ, ವಿ.ಎಸ್. ಗಿರಿಯಪ್ಪಗೌಡ್ರ, ಜಿ.ಎಲ್. ಮರ್ಚಣ್ಣವರ ಸೇರಿದಂತೆ ಸಹಾಯಕಿಯರು, ತಾಯಂದಿರು, ಮಕ್ಕಳು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here