ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಮ್ಯಾಗೇರಿ ಓಣಿಯ ಶ್ರೀ ಹೊನ್ನಕೇರಿ ಮಲ್ಲಯ್ಯ ಟ್ರಸ್ಟ್ ಕಮಿಟಿಯಿಂದ ಶ್ರೀ ಹೊನ್ನಕೇರಿ ಮಲ್ಲಯ್ಯ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಭಾಭವನ ಉದ್ಘಾಟನಾ ಸಮಾರಂಭವು ಮೇ 2ರಂದು ನೆರವೇರಲಿದೆ.
ಮುಂಜಾನೆ ಮೂರ್ತಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ನಂತರ ಪ್ರಸಾದ ವಿನಿಯೋಗ, ಸಂಜೆ 6 ಗಂಟೆಗೆ ಸಭಾಭವನ ಉದ್ಘಾಟನೆ ಹಾಗೂ ಧರ್ಮಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹುಲ್ಲೂರು ಅಮೋಘ ಸಿದ್ದೇಶ್ವರಮಠದ ಶ್ರೀ ರಾಯಪ್ಪಯ್ಯನವರು ಅಮೋಘಿಮಠ ದಿವ್ಯ ಸಾನ್ನಿಧ್ಯ ವಹಿಸುವರು. ಹಿರಿಯ ಮುಖಂಡ ಪಿ.ಆರ್. ಕುಲಕರ್ಣಿ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಅರ್ಚಕ ನೀಲಪ್ಪ ಕೋರಿ ಉಪಸ್ಥಿತರಿರುವರು. ಸಭೆಯ ಅಧ್ಯಕ್ಷತೆಯನ್ನು ಕಮಿಟಿ ಅಧ್ಯಕ್ಷ ಮಲ್ಲೇಶ ಗೊಜಗೊಜಿ ವಹಿಸುವರು.
ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಉದ್ಯಮಿ ಮಲ್ಲೇಶಪ್ಪ ತಾಂಬೆ ಸಭಾಭವನ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕರುಗಳಾದ ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ ಸಿಬಾರ ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ವಿ.ಜಿ. ಪಡಗೇರಿ, ನಿಂಗಪ್ಪ ಬನ್ನಿ ಉದ್ಘಾಟಿಸಲಿದ್ದು, ಮಂಜುನಾಥ ಕೊಕ್ಕರಗುಂದಿ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಸಮಾಜದ ಮುಖಂಡ ಬಸಣ್ಣ ಬೆಟಗೇರಿ, ಶೇಖಣ್ಣ ಕಾಳೆ, ಗಂಗಮ್ಮ ಗದ್ದಿ, ವೀರೇಂದ್ರಗೌಡ ಪಾಟೀಲ, ಬಸವರಾಜ ಹೊಳಲಾಪೂರ, ಮಂಜುನಾಥ ಘಂಟಿ, ಜಯಕ್ಕ ಕಳ್ಳಿ, ಭಾಗ್ಯಶ್ರೀ ಬಾಬಣ್ಣ ಸೇರಿದಂತೆ ಅನೇಕ ಮುಖಂಡರು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವದು ಎಂದು ಸಂಘಟಕರು ತಿಳಿಸಿದ್ದಾರೆ.



