ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ, ಯುವ ರೆಡ್‌ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕೆ.ಎಲ್.ಇ. ಸೊಸೈಟಿ ಸ್ಕೂಲ್‌ನ ಪ್ರಾಚಾರ್ಯೆ ಕಲ್ಪನಾ ಚಚಡಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸ್ಪರ್ಧಾತ್ಮಕವಾಗಿ ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬರಲು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಭರಮಪ್ಪ ಬಡಪ್ಳವರ ಮಾತನಾಡಿ, ಜೀವನದಲ್ಲಿ ನಿಮಗೆ ಉತ್ತಮ ಇಂಜಿನಿಯರ್ ಆಗಲು ಸದಾವಕಾಶ ದೊರಕಿದೆ ಎಂದರಲ್ಲದೆ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರಕಬಹುದಾದ ಸೌಲಭ್ಯಗಳನ್ನು ತಿಳಿಸಿದರು.
ವಿಭಾಗಾಧಿಕಾರಿಗಳಾದ ಜೈನಾಬಿ, ಕೊಟ್ರಗೌಡ, ಶಿವಾನಂದ ಪೂಜಾರ, ಮಂಗಳಗೌರಮ್ಮ ಶಿವಸಿಂಪಿಗೇರ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಮಂಜೂರ್ ಹಸನ್ ಹಾಗೂ ಕಛೇರಿ ಅಧೀಕ್ಷಕರುಗಳಾದ ವೀರೇಶ ಕಂಠಿಮಠ ಮತ್ತು ರಮೇಶ ಮಾವಿನಕಾಯಿ, ಸಮಸ್ತ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ಪಾಟೀಲ, ಚಂದ್ರು ಆರ್, ಕನಕರಾಯ, ಕಾರ್ತಿಕ ಶೀಲವಂತರ, ಸ್ನೇಹಾ ನರೇಗಲ್ ಮುಂತಾದವರಿದ್ದರು.



