ವಿಜಯಸಾಕ್ಷಿ ಸುದ್ದಿ, ರೋಣ: ಡಿ.೧೫ರಂದು ರೋಣ ಮತಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ವಿವಿಧ ಕಾಮಗಾರಿಗಳ ಉಧ್ಘಾಟನಾ ಸಮಾರಂಭ ನೆರವೇರಲಿದ್ದು, ಈ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಅನೇಕ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಆಗಮಿಸಲಿದ್ದಾರೆ ಎಂದು ಖನಿಜ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜಿ.ಎಸ್. ಪಾಟೀಲ ಮಾಹಿತಿ ನೀಡಿದ್ದಾರೆ.
ಅಮೃತ ಯೋಜನೆಯಡಿ ರೋಣ, ಗಜೇಂದ್ರಗಡ, ನರೇಗಲ್ಲ ಪಟ್ಟಣಗಳಿಗೆ ಕುಡಿಯುವ ನೀರು ಯೋಜನೆ-೬೭೯೮ ಲಕ್ಷ ರೂ.ಗಳು, ರೋಣ ಪಟ್ಟಣದಲ್ಲಿ ಜಿಟಿಟಿಸಿ ಕಾಲೇಜು ಕಟ್ಟಡ ನಿರ್ಮಾಣ-೫೦೦೦ ಲಕ್ಷ ರೂ.ಗಳು, ಮುನವಳ್ಳಿ ಕೋಟುಮಚಗಿ ರಾಹೆ-೮೩ರ ೯೫,೯೦ ಕಿ.ಮೀಯಿಂದ ೧೦೪.೫೦ ಕಿಮೀ ಹಾಗೂ ೧೦೭ರಿಂದ ೧೧೦ ಕಿ.ಮೀವರೆಗೆ ರಸ್ತೆ ಸುಧಾರಣೆ-೨೦೦೦ ಲಕ್ಷ ರೂ.ಗಳು, ಜಕ್ಕಲಿ ಗ್ರಾಮದಲ್ಲಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಸ್ಮಾರಕ ನಿರ್ಮಾಣ-೯೯೫ ಲಕ್ಷ ರೂ.ಗಳು, ಗಜೇಂದ್ರಗಡ ತಾಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣ-೮೬೦ ಲಕ್ಷ ರೂ.ಗಳು, ರೋಣ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ-ಬಾಲಕರ ವಸತಿ ನಿಲಯ ಕಟ್ಟಡ ಹಾಗೂ ಗಜೇಂದ್ರಗಡ ಮತ್ತು ನರೇಗಲ್ಲ ಪಟ್ಟಣಗಳಲ್ಲಿ ೨ ವಸತಿ ನಿಲಯಗಳ ಪ್ರಾರಂಭೋತ್ಸವ-೮೦೦ ಲಕ್ಷ ರೂ.ಗಳು, ಡಂಬಳ, ಪೇಠಾಲೂರ, ಜಂತ್ಲಿ ಶಿರೂರ ಗ್ರಾಮಗಳ ಕೆರೆ ಅಭಿವೃದ್ಧಿ ಹಾಗೂ ಸವಡಿ ಹೊನ್ನಾಪೂರ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಾಣ-೬೫೦ ಲಕ್ಷ ರೂ.ಗಳು, ರೋಣ ಪಟ್ಟಣದಲ್ಲಿ ಪ್ರವಾಸಿ ಮಂದಿರ ಕಟ್ಟಡ-೩೯೫ ಲಕ್ಷ ರೂ.ಗಳು, ರೋಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಕೊಠಡಿಗಳ ನಿರ್ಮಾಣ ಹಾಗೂ ಡಂಬಳ ಗ್ರಾಮದಲ್ಲಿ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ-೨೮೭ ಲಕ್ಷ ರೂ.ಗಳು, ಡಂಬಳದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ-೯೩,೮೧ ಲಕ್ಷ ರೂ.ಗಳು, ಜಿಗಳೂರ ಕೆರೆ ಪಕ್ಕದಲ್ಲಿ ಪ್ರವಾಸಿ ಉದ್ಯಾನವನ-೫೦ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಲಿವೆ.
ಕಾಮಗಾರಿಗಳ ಉದ್ಘಾಟನೆ
ಮೇವುಂಡಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ, ಗಜೇಂದ್ರಗಡದಲ್ಲಿ ವಸತಿ ನಿಲಯ ಮತ್ತು ರೋಣದಲ್ಲಿ ವಸತಿ ಶಾಲೆ ಪ್ರಾರಂಭೋತ್ಸವ-೧೦೦೦ ಲಕ್ಷ ರೂ.ಗಳು, ರೋಣ, ಗಜೇಂದ್ರಗಡ, ನರೇಗಲ್ಲ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ-೩೯೨.೦೧ ಲಕ್ಷ ರೂ.ಗಳು, ಹಿರೇವಡ್ಡಟ್ಟಿ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಟ್ಟಡ-೨೫೦ ಲಕ್ಷ ರೂ.ಗಳು, ಸವಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿ ಗೃಹ-೯೧.೭೫ ಲಕ್ಷ ರೂ.ಗಳು, ಅಬ್ಬಿಗೇರಿ ಗ್ರಾಮದ ಸಾರ್ವಜನಿಕ ಗ್ರಂಥಾಲಯ-೨೭.೦೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇಂದು ಉದ್ಘಾಟನೆಗೊಳ್ಳಲಿವೆ.