ನಿರಂತರ ಮಳೆಯಿಂದ ಉಕ್ಕಿ ಹರಿದ ಹಳ್ಳ: ಸಂಚಾರ ಸ್ಥಗಿತ, ವಿಂಡ್ ಪ್ಯಾನ್ ಕಂಪನಿ ವಿರುದ್ಧ ಆಕ್ರೋಶ..!

0
Spread the love

ಗದಗ: ಕರ್ನಾಟಕದಲ್ಲಿ ಕಳೆದ ವಾರದಿಂದ ನಿರಂತರ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಇದರಿಂದ ಸಾಕಷ್ಟು ಅನಾಹುತಗಳು ಸಹ ಆಗುತ್ತಿದೆ. ಅದರಂತೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಜಕ್ಕಲಿ ಗ್ರಾಮದ ಸಮೀಪದ ಅಗಸರ ಹಳ್ಳ ಹುಕ್ಕಿ ಹರಿದಿದ್ದು, ರೋಣ, ಜಕ್ಕಲಿ ನರೇಗಲ್ ಮಾರ್ಗದ ರಸ್ತೆ ಸ್ಥಗಿತಗೊಂಡಿದೆ. ಇದರಿಂದ ಜನರು ಕಂಗಲಾಗಿದ್ದಾರೆ.

Advertisement

ಜಕ್ಕಲಿ ಗ್ರಾಮದ ಜನರು ಪಟ್ಟಣ ಪ್ರದೇಶಕ್ಕೆ ಹೋಗಲು ಪರದಾಟ ನಡೆಸುತ್ತಿದ್ದು, ಅದಲ್ಲದೆ ವಿದ್ಯುತ್ ಯಂತ್ರಗಳನ್ನು ಸಾಗಿಸಲು, ಹಳ್ಳಕ್ಕೆ ಮಣ್ಣು ಹಾಕಿದ್ದ ವಿಂಡ್ ಪ್ಯಾನ್ ಕಂಪನಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಂಪನಿ ಎಡವಟ್ಟಿನಿಂದ ಹಳ್ಳದಲ್ಲಿ ನೀರು ಸರಾಗವಾಗಿ ಹರಿಯದೆ, ಹಳ್ಳ ಕಟ್ಟಿದ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here